ಊಟಕ್ಕೆ ಗತಿಯಿಲ್ಲದೇ ಯುವಕರು ಸೇನೆ ಸೇರ್ತಾರೆ ಎಂಬ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್
ಬಿಜೆಪಿ ತನ್ನ ಟ್ವಿಟರ್ ಪೇಜ್ ನಲ್ಲಿ ಸಿಎಂ ಕುಮಾರಸ್ವಾಮಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುವ ವಿಡಿಯೋ ಪ್ರಕಟಿಸಿದ್ದು, ಇದರಲ್ಲಿ ಸಿಎಂ ‘ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲ ಎಂದು ಯಾರು ಪರದಾಡುತ್ತಾರೋ ಅವರು ಹೋಗಿ ಬೇರೆ ದಾರಿಯಿಲ್ಲದೆ ಸೇನೆಗೆ ಸೇರುತ್ತಾರೆ. ಅಂತಹ ಯುವಕರ ಜೀವನದಲ್ಲಿ ಚೆಲ್ಲಾಟವಾಡುವ ಪ್ರಧಾನಿ ಇವರು’ ಎಂದು ಮೋದಿ ವಿರುದ್ಧ ಹರಿಹಾಯುತ್ತಾರೆ. ಈ ವಿಡಿಯೋ ಜತೆಗೆ ಬಿಜೆಪಿ ಮೊದಲು ನಿಮ್ಮ ಮಗನನ್ನು ಸೇನೆಗೆ ಸೇರಿಸಿ. ಆಗ ಸೇನೆಯವರ ಕಷ್ಟವೇನೆಂದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿತ್ತು.