25ರಿಂದ 30 ನಿಗಮ ಮಂಡಳಿ ಹಂಚಿಕೆಗೆ ಸಿಎಂ ಪ್ಲ್ಯಾನ್ ಮಾಡಿದ್ದು, ಮಾರ್ಚ್ 20 ನಂತರ ಹಂಚಿಕೆ ಮಾಡಲಿದ್ದು ಈ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಸಿಎಂ ತೀರ್ಮಾನ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದರೂ ಹೆಚ್ಚು ಸ್ಥಾನ ಗಳಿಸಿರಲಿಲ್ಲ. ಹೀಗಾಗಿ ಅಧಿಕಾರ ನೀಡಿ ಉತ್ಸಾಹ ತುಂಬಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೇ ಹಿಂದಿನಿಂದಲೂ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಎಂಟಿಬಿ ಪಟ್ಟುಹಿಡಿದಿದ್ದು, ಹೀಗಾಗಿ ಬಿಡಿಎ ಅಧ್ಯಕ್ಷ ಸ್ಥಾನ ಎಂಟಿಬಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.