ರಾಜ್ಯದ ಮೀಸಲಾತಿ 75% ಹೆಚ್ಚಳ ಮಾಡೋದಾಗಿ ಪ್ರಣಾಳಿಕೆಯಲ್ಲಿ ಸಿಎಂ ಹೇಳಿದ್ದಾರೆ

ಶನಿವಾರ, 24 ಜೂನ್ 2023 (17:33 IST)
ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕಮಾತನಾಡಿದ ಜಯಮೃತ್ಯುಂಜಯಸ್ವಾಮೀಜಿ ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2A ಮೀಸಲಾತಿ ಹೋರಾಟ ಮಾಡಿದ್ವಿ.ಸರ್ಕಾರ 2D ಅನ್ನೋ ಪ್ರವರ್ಗ ರಚನೆ ಮಾಡಿತ್ತು.ಚುನಾವಣೆ ಕಾರಣಕ್ಕಾಗಿ ಮೀಸಲಾತಿ ನೀಡಿದ್ರು.ಸರ್ಕಾರ ರಚನೆ ಬಳಿಕ ನಮ್ಮ ನಿಯೋಗ ಭೇಟಿ ಮಾಡಿ ಮೀಸಲಾತಿ ಬಗ್ಗೆ ಮನವಿ ಮಾಡಿದ್ದೇವೆ.ಕೋರ್ಟ್‌ನಲ್ಲಿ ಮೀಸಲಾತಿ ಪ್ರಕರಣವಿರುವುದರಿಂದ ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ವಿ.ಕೇಂದ್ರದ ಒಬಿಸಿ ಪಟ್ಟಿಗೂ ಕೂಡ ಸೇರಿಸುವಂತೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದೇವೆ.ಬಜೆಟ್ ಅಧಿವೇಶನದ ಬಳಿಕ ಮೀಸಲಾತಿ ಸಂಬಂಧವಾಗಿ ತಜ್ಞರು ಸಭೆ ಕರೆಯುವುದಾಗಿ ಸಿಎಂ ತಿಳಿಸಿದ್ದಾರೆ.ರಾಷ್ಟ್ರೀಯ ಹಿಂದುಳಿದ ಆಯೋಗದ ಜೊತೆಗೆ ಮಾತನಾಡಿ ಒಬಿಸಿ ಪಟ್ಟಿಗೆ ಸೇರಿಸುವಂತೆ ಚರ್ಚೆ ಮಾಡುವುದಾಗಿ ಸಿಎಂ ತಿಳಿಸಿದರು ಎಂದು ಜಯಮೃತ್ಯುಂಜಯಸ್ವಾಮೀಜಿ ಹೇಳಿದ್ದಾರೆ.
 
ಎಲ್ಲಾ ಸಮುದಾಯದ ಮೀಸಲಾತಿ ಸಂಬಂಧವಾಗಿ ಕಾನೂನು ತೊಡಕುಗಳ ಬಗ್ಗೆ ಸಭೆ ಮಾಡಿ ಕಾನೂನು ನ್ಯಾಯ ಕೊಡಿಸುವುದಾಗಿ ಸಿಎಂ ತಿಳಿಸಿದ್ದಾರೆ.ರಾಜ್ಯದ ಮೀಸಲಾತಿ 75% ಹೆಚ್ಚಳ ಮಾಡೋದಾಗಿ ಹೇಳಿದ್ದಾರೆ.ಆ ಬಗ್ಗೆ ಚರ್ಚೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಜಯಮೃತ್ಯುಂಜಯಸ್ವಾಮೀಜಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ