ಸಿಎಂ ಸಿದ್ದರಾಮಯ್ಯ ಪಟ್ಟಿ ಮಾಡಿರುವ ಬಿಜೆಪಿ ಅವಧಿಯ 22 ಹಗರಣಗಳ ಲಿಸ್ಟ್ ಇಲ್ಲಿದೆ

Krishnaveni K

ಶನಿವಾರ, 20 ಜುಲೈ 2024 (09:56 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಲ್ಮೀಕಿ ಹಗರಣ, ಮುಡಾ ಹಗರಣ ಅಸ್ತ್ರ ಪ್ರಯೋಗಿಸಿರುವ ಬಿಜೆಪಿ ವಿರುದ್ಧ ಈಗ ಸಿಎಂ ಸಿದ್ದರಾಮಯ್ಯ ಹಳೆಯ ಹಗರಣಗಳ ಪಟ್ಟಿ ಹೊರಹಾಕಿದ್ದಾರೆ.

ಬಿಜೆಪಿ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿರುವ ಸಿದ್ದರಾಮಯ್ಯ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದ್ದ ಒಟ್ಟು 22 ಹಗರಣಗಳ ಪಟ್ಟಿ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳಾಗಿತ್ತು. ಆಗೆಲ್ಲಾ ಸುಮ್ಮನಿದ್ದ ಇಡಿ ಇಲಾಖೆ ಈಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಅವರು ಹೇಳಿರುವ ಹಗರಣಗಳ ಪಟ್ಟಿ ಇಲ್ಲಿದೆ.
ಎಪಿಎಂಸಿ-47.16 ಕೋಟಿ ರೂ
ಬೋವಿ ಅಭಿವೃದ್ಧಿ ನಿಗಮ-87 ಕೋಟಿ
ದೇವರಾಜ ಅರಸು ಟ್ರಕ್ ಟರ್ಮಿನ್-50 ಕೋಟಿ
ಗಂಗಾ ಕಲ್ಯಾಣ ಯೋಜನೆ-430 ಕೋಟಿ
ಪ್ರವಾಸೋದ್ಯಮ -247 ಕೋಟಿ
ಕಿಯೋನಿಕ್ಸ್-500 ಕೋಟಿ
ಕೊವಿಡ ಹಗರಣ-40 ಸಾವಿರ ಕೋಟಿ
ಶೇ.40 ಕಮಿಷನ್ ದಂಧೆ
ಪಿಎಸ್ ಐ ನೇಮಕಾತಿ-ನೂರಾರು ಕೋಟಿ
ಪರಶುರಾಮ ಥೀಮ್ ಪಾರ್ಕ್-11 ಕೋಟಿ
ಬಿಟ್ ಕಾಯಿನ್ ಹಗರಣ- ಸಾವಿರಾರು ಕೋಟಿ
ಯಡಿಯೂರಪ್ಪಆಪ್ತ ಉಮೇಶ್ ಅಕ್ರಮ ಆಸ್ತಿ-750 ಕೋಟಿ
ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಆದಾಯ ಮೀರಿ ಆಸ್ತಿ ಆರೋಪ
ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಅಕ್ರಮ ಆರೋಪ
ಯಡಿಯೂರಪ್ಪ ವಿರುದ್ಧ ಅಬಕಾರಿ ಸಚಿವ ನಾಗೇಶ್ ರಾಜ್ಯಪಾಲರಿಗೆ ದೂರು
ಆರ್ ಅಶೋಕ್ ವಿರುದ್ಧ ಕಂದಾಯ ಇಲಾಖೆ ಹಗರಣ
ಕಕೆಆರ್ ಡಿಬಿ-200 ಕೋಟಿ
ಬಿಸಿ ಪಾಟೀಲ್ ಕೃಷಿ ಇಲಾಖೆ ಹಗರಣ
ಶಶಿಕಲಾ ಜೊಲ್ಲೆ ಮಾತೃಪೂರ್ಣ ಯೋಜನೆ, ಮೊಟ್ಟೆ ಹಗರಣ
ಕೆಐಎಡಿಬಿ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಇತರರ ಹಗರಣ
ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣ
ಗಣಿ ಹಗರಣ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ