ಮೈಸೂರು: ಸಿಎಂ ಸಿದ್ದರಾಮಯ್ಯ ಈ ಹಿಂದೆ ಮಹಿಳೆಯ ಶಾಲ್ ಹಿಡಿದೆಳೆದ ಪ್ರಕರಣಕ್ಕೆ ಈಗ ಮರುಜೀವ ಸಿಕ್ಕಿದೆ. ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಅಗಿದೆ.
ಮೈಸೂರಿನಲ್ಲಿ ಆರು ವರ್ಷಗಳ ಹಿಂದೆ ನಡೆದ ಪ್ರಕರಣವಿದು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬಳು ಮೈಕ್ ಹಿಡಿದುಕೊಂಡು ಸಿಎಂ ಸಿದ್ದರಾಮಯ್ಯ ಎದುರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಮಹಿಳೆಯ ಚೂಡಿದಾರ್ ದುಪಟ್ಟಾಕ್ಕೇ ಕೈ ಹಾಕಿ ಎಳೆದಿದ್ದರು.
ಬಳಿಕ ಮಹಿಳೆಯ ಮೇಲೆ ಕೂಗಾಡಿದ್ದರು. ಆಗಲೇ ಈ ವಿಚಾರ ಭಾರೀ ಸುದ್ದಿಯಾಗಿತ್ತು. ಆದರೆ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಈಗ ಆರು ವರ್ಷಗಳ ನಂತರ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಪ್ರಯೋಗಿಸಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಸಿಟಿ ರವಿ ವಿರುದ್ಧ ಕಾಂಗ್ರೆಸ್ ಸಮರ ಸಾರಿರುವ ಬೆನ್ನಲ್ಲೇ ಬಿಜೆಪಿ ಈಗ ಸಿಎಂ ಹಳೇ ವಿಡಿಯೋವನ್ನು ಪ್ರತ್ಯಸ್ತ್ರ ಮಾಡಿಕೊಂಡಿದೆ. ಸಿಟಿ ರವಿ ಮಾಡಿದ್ದು ಮಹಿಳೆಯರಿಗೆ ಅಪಮಾನವಾದರೆ ಸಿದ್ದರಾಮಯ್ಯ ಮಾಡಿದ್ದೂ ಅದೇ ಅಲ್ಲವೆ ಎಂಬುದು ಬಿಜೆಪಿ ಪ್ರಶ್ನೆ. ಇಲ್ಲಿದೆ ಆ ಹಳೇ ವಿಡಿಯೋ.