ಬೆಳಗಾವಿ: ವಿಧಾನಪರಿಷತ್ ನಲ್ಲಿ ನಡೆದಿದ್ದ ಸಿಟಿ ರವಿಯವರ ನಿಂದನಾತ್ಮಕ ಪದ ಬಳಕೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಸಿಟಿ ರವಿ ಆ ಪದ ಬಳಕೆ ಮಾಡಿದ್ದು ನಿಜ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಇಂದು ವಿಡಿಯೋ ಬಿಡುಗಡೆ ಮಾಡಿ ಸಾಕ್ಷ್ಯ ತೋರಿಸಿದ್ದಾರೆ. ಇದನ್ನು ಮೋದಿಯವರಿಗೂ ತೋರಿಸಿ ನ್ಯಾಯ ಕೇಳುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಇನ್ನು, ನನ್ನ ಗಂಡ ಅಂತಹ ಪದ ಬಳಕೆ ಮಾಡುವವರಲ್ಲ, ಅವರನ್ನು ಕೊಲೆಗಾರ ಎಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಸಿಟಿ ರವಿ ಕೊಲೆ ಮಾಡಿದ್ದನ್ನು ನೋಡಿದ್ರಾ ಎಂದು ಪ್ರಶ್ನಿಸಿದ್ದ ಸಿಟಿ ರವಿ ಪತ್ನಿ ಪಲ್ಲವಿಗೂ ಸಚಿವೆ ತಿರುಗೇಟು ನೀಡಿದ್ದಾರೆ. ಹಾಗಿದ್ರೆ ನಾನೂ ಪ್ರಶ್ನೆ ಮಾಡುತ್ತೇನೆ, ಅಲ್ಲಮ್ಮಾ ನಿನ್ನ ಗಂಡ ರಾಹುಲ್ ಗಾಂಧಿಯವರನ್ನು ಡ್ರಗ್ ಅಡಿಕ್ಟ್ ಎಂದಿದ್ದಾರಲ್ಲಾ, ರಾಹುಲ್ ಗಾಂಧಿ ಡ್ರಗ್ಸ್ ತಗೊಳ್ಳುವುದನ್ನು ಸಿಟಿ ರವಿ ನೋಡಿದ್ರಾ? ಅದು ಹೇಗೆ ರಾಹುಲ್ ಗಾಂಧಿಯವರು ಡ್ರಗ್ ಅಡಿಕ್ಟ್ ಎಂದು ಹೇಳುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಆವತ್ತು ಅನ್ಯಾಯ ಆಗಿದ್ದು ನನಗೆ. ಅದಕ್ಕೇ ದೂರು ಕೊಟ್ಟೆ. ಈ ವಿಚಾರವಾಗಿ ರವಿಯವರನ್ಮು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನನಗೆ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.