ಸಿದ್ದರಾಮಯ್ಯನವರದ್ದು ಕಮಿಷನ್ ಆಂಡ್ ಪ್ಯಾಕೆಜ್ ಸರಕಾರ: ಕುಮಾರಸ್ವಾಮಿ

ಸೋಮವಾರ, 30 ಮೇ 2016 (12:23 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಕಮಿಷನ್ ಆಂಡ್ ಪ್ಯಾಕೆಜ್ ಸರಕಾರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್‌ ರಾಜ್ಯಾದ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಸೆಕ್ಯೂರಿಟಿ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿದ್ದರು, ಮುಖ್ಯಮಂತ್ರಿಯವರು ಸಚಿವರ ವಿರುದ್ಧ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರ ಭ್ರಷ್ಟರ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು
 
ಪೊಲೀಸರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಸರಕಾರದ ಗಮನಕ್ಕೆ ತಂದು ವರ್ಷವೇ ಕಳೆದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
 
ರಾಜ್ಯಸಭೆ ಚುನಾವಣೆಗೆ ಬಿ.ಎ.ಫಾರೂಖ್ ಅವರನ್ನು ಕಣಕ್ಕಿಳಿಸಲಾಗಿದೆ. ಚುನಾವಣೆಯ ದಿನ ಏನು ಬೇಕಾದರು ಆಗಬಹುದು. ಯಾರು ಯಾರೀಗೆ ಮತದಾನ ಮಾಡುತ್ತಾರೊ ನೋಡೋಣ. ಮೊನ್ನೆ ಪಕ್ಷೇತರ ಶಾಸಕರು ಜೆಡಿಎಸ್ ಪರವಾಗಿದ್ದರು. ಆದರೆ, ಇದೀಗ ಕಾಂಗ್ರೆಸ್ ಅವರನ್ನು ಸೆಳೆದುಕೊಂಡಿದೆ ಎಂದು ಹೇಳಿದರು. 
 
ವಿಧಾನ ಪರಿಷತ್ ಚುನಾವಣೆಗೆ ಎರಡನೇಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಕುರಿತು ಬಿಜೆಪಿ ಪಕ್ಷದ ಬೆಂಬಲವನ್ನು ಕೇಳಿದ್ದೇವೆ. ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಬೆಂಬಲ ಅವಶ್ಯವಾಗಿರುವುದರಿಂದ ಕೊಟ್ಟು ತೆಗೆದುಕೊಳ್ಳುವ ಪಾಲಿಸಿಯನ್ನು ಅನುಸರಿಸುವುದು ಸೂಕ್ತ ಎನ್ನುವುದು ನನ್ನ ನಿಲುವು ಎಂದು ಹೇಳಿದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ