ಸಿಎಂ ಯೋಗಿ ಇಫೆಕ್ಟ್? ಬೆಂಗಳೂರಿನಲ್ಲೂ ಮಾಂಸದಂಗಡಿಗಳಿಗೆ ರೇಡ್!

ಗುರುವಾರ, 6 ಏಪ್ರಿಲ್ 2017 (10:16 IST)
ಬೆಂಗಳೂರು: ಉತ್ತರ ಪ್ರದೇಶದಲ್ಲಿ ಅನಧಿಕೃತ ಮಾಂಸ ಮಾರಾಟ ನಿಷೇಧಿಸಿದ ಸಿಎಂ ಯೋಗಿ ಆದಿತ್ಯನಾಥ್ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಇದೀಗ ಯೋಗಿ ಕ್ರಮದಿಂದ ಪ್ರಭಾವಿತಗೊಂಡು ಬೆಂಗಳೂರಿನಲ್ಲೂ ಬಿಬಿಎಂಪಿ ಅನಧಿಕೃತ ಮಾಂಸದಂಗಡಿಗಳ ಮೇಲೆ ರೇಡ್ ಮಾಡಲಿದೆಯೇ?

 

ಬಿಬಿಎಂಪಿ ಅನಧಿಕೃತ ಮಾಂಸದಂಗಡಿಗಳ ಮೇಲೆ ರೇಡ್ ನಡೆಸಲು ತಂಡವೊಂದನ್ನು ರಚಿಸಿದೆ.  ಈಗಾಗಲೇ ಸುಮಾರು 250 ಅಕ್ರಮ ಮಾರಾಟ ಮಳಿಗೆಗಳಿಗೆ ನೋಟೀಸು ಜಾರಿ ಮಾಡಲಾಗಿದ್ದು, ಸದ್ಯದಲ್ಲೇ ದಾಳಿ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

 
ನಿಯಮದ ಪ್ರಕಾರ ಹೊರವರ್ತುಲ ರಸ್ತೆಯ ಪಕ್ಕ 20 ಅಡಿ ಹಾಗೂ ಇತರೆಡೆ 60 ಅಡಿ ದೂರ ಮಾತ್ರ ಮಾಂಸದಂಗಡಿಗಳಿಗೆ ಪರವಾನಗಿ ನೀಡಲಾಗುತ್ತದೆ. ಅಲ್ಲದೆ ತಾಜಾ ಮಾಂಸದಂಗಡಿಗಳು ಮತ್ತು ಮಾಂಸ ಸಂಗ್ರಹಿಸಿಡುವ ವ್ಯವಸ್ಥೆಯಿರುವ ಅಂಗಡಿಗಳಿಗೆ ಪರವಾನಗಿ ನೀಡಲಾಗುತ್ತದೆ. ಇದನ್ನು ಮೀರಿದವರಿಗೆ ಇದೀಗ ಸಂಕಟ ತಪ್ಪಿದ್ದಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ