India Pakistan: ಪಾಕಿಸ್ತಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಟ್ರಂಪ್ ಹೇಳುವುದು ಬೇಡ: ಪ್ರಧಾನಿ ಮೋದಿ

Krishnaveni K

ಸೋಮವಾರ, 12 ಮೇ 2025 (13:57 IST)
ನವದೆಹಲಿ: ಪಾಕಿಸ್ತಾನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮಗೆ ಹೇಳುವುದು ಬೇಡ ಎಂದು ಪ್ರಧಾನಿ ಮೋದಿ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಈ ಮಾತನ್ನು ಪ್ರಧಾನಿ ಮೋದಿ ನೇರವಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಕದನವೇರ್ಪಟ್ಟಾಗ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶ ಮಾಡಿ ಕದನ ವಿರಾಮಕ್ಕೆ ಒಪ್ಪಿದೆ ಎಂದು ಘೋಷಣೆ ಮಾಡಿದ್ದರು.

ಇದಕ್ಕೆ ಭಾರತೀಯರೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮ ದೇಶದ ವಿಚಾರದಲ್ಲಿ ತಲೆ ಹಾಕಲು ಟ್ರಂಪ್ ಯಾರು ಎಂದು ಹಲವರು ಪ್ರಶ್ನೆ ಮಾಡಿದ್ದರು. ಭಾರತ ಮತ್ತು ಪಾಕ್ ಸಂಘರ್ಷದ ವೇಳೆ ಜೆಡಿ ವ್ಯಾನ್ ದೂರವಾಣಿ ಮೂಲಕ ಮೋದಿಯವರನ್ನು ಸಂಪರ್ಕಿಸಿ ಮಾತನಾಡಿದ್ದರು. ಈ ವೇಳೆ ಮೋದಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ಭಾರತ ಮತ್ತು ಪಾಕಿಸ್ತಾನವನ್ನು ಸಮನಾಗಿ ನೋಡಲು ಸಾಧ್ಯವಿಲ್ಲ. ಪಾಕಿಸ್ತಾನವೇನಾದರೂ ದಾಳಿ ಮಾಡಿದ್ರೆ ತಕ್ಕ ತಿರುಗೇಟು ನೀಡುತ್ತೇವೆ. ಇದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳುವುದು ಉತ್ತಮ ಎಂದು ಮೋದಿ ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ