ಕರ್ನಾಟಕ ಕಾಂಗ್ರೆಸ್ ಪ್ರಕಾರ ಕಾಶ್ಮೀರ ಪಾಕಿಸ್ತಾನ ಮ್ಯಾಪ್ ನಲ್ಲಿ: ಎಡವಟ್ಟು

Krishnaveni K

ಸೋಮವಾರ, 12 ಮೇ 2025 (14:08 IST)
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪ್ರಕಾರ ಕಾಶ್ಮೀರ ಇರುವುದು ಪಾಕಿಸ್ತಾನದಲ್ಲಿ. ಮೋದಿಯನ್ನು ಟೀಕಿಸುವ ಭರದಲ್ಲಿ ಕರ್ನಾಟಕ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಪುಟದಲ್ಲಿ ಎಡವಟ್ಟು ಮಾಡಿಕೊಂಡಿದೆ.

ಆಪರೇಷನ್ ಸಿಂಧೂರ್ ಮೂಲಕ ತನ್ನ ಮೇಲೆ ಉಗ್ರ ದಾಳಿ ನಡೆಸಿದ ಪಾಕಿಸ್ತಾನ ಮೇಲೆ ಭಾರತ ಸೇಡು ತೀರಿಸಿಕೊಂಡಿತ್ತು. ಇದಾದ ಬೆನ್ನಲ್ಲೇ ಪಾಕಿಸ್ತಾನ ಮತ್ತು ಭಾರತದ ನಡುವೆ ಕದನವೇರ್ಪಟ್ಟಿತ್ತು.

ಇದರ ಬೆನ್ನಲ್ಲೇ ಭಾರತದ ಒತ್ತಡಕ್ಕೂ ಮಣಿಯದೇ ಐಎಂಎಫ್ ಪಾಕಿಸ್ತಾನಕ್ಕೆ ಸಾಲ ನೀಡಿತ್ತು. ಇದನ್ನೇ ಇಟ್ಟುಕೊಂಡು ಪ್ರಧಾನಿ ಮೋದಿಯನ್ನು ಕರ್ನಾಟಕ ಕಾಂಗ್ರೆಸ್ ಪೇಜ್ ಟೀಕಿಸಿತ್ತು. ಆದರೆ ಟೀಕಿಸುವ ಭರದಲ್ಲಿ ಭಾರತದ ಮ್ಯಾಪ್ ಹಾಕುವಾಗ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂಬಂತೆ ಬಿಂಬಿಸಿತ್ತು.

ಇದನ್ನು ಗಮನಿಸಿದ ನೆಟ್ಟಿಗರು ಭಾರೀ ಟೀಕೆ ನಡೆಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಡಿಲೀಟ್ ಮಾಡಿದೆ. ಆದರೆ ಈಗಾಗಲೇ ಹಲವರು ಇದನ್ನು ಶೇರ್ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ