ಮಳೆಯಲ್ಲಿ ಕಂದಕಕ್ಕೆ ಬಿದ್ದ ಕೋಕ್ ತುಂಬಿದ ಲಾರಿ

ಮಂಗಳವಾರ, 15 ಅಕ್ಟೋಬರ್ 2019 (16:16 IST)
ಕೋಕ್ ತುಂಬಿದ ಲಾರಿಯೊಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.

ಕೋಕ್ ತುಂಬಿದ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಈ ಘಟನೆ ಹುಬ್ಬಳ್ಳಿ ನಗರದ ಹೊರವಲಯದ ಕುಸುಗಲ್ ಗ್ರಾಮದ ಬಳಿ ನಡೆದಿದೆ. 

ಹುಬ್ಬಳ್ಳಿಯಿಂದ ನವಲಗುಂದ ಮಾರ್ಗವಾಗಿ ಹೋಗುತ್ತಿದ್ದ ಲಾರಿ ಇದಾಗಿದ್ದು, ಸುರಿದ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಲಾರಿಯಲ್ಲಿ ಎಷ್ಡು ಜನರಿದ್ದರು? ಯಾರು? ಎಂಬ ಮಾಹಿತಿ ಲಭ್ಯವಾಗಿಲ್ಲ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು,  ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ