ಸೈನಿಕರ ಮನೆಗೆ ತೆರಳಿ ಸಂಗ್ರಹ

ಬುಧವಾರ, 16 ಫೆಬ್ರವರಿ 2022 (16:32 IST)

ನಿಮ್ಮ ದೇಶ ನಿಮಗಾಗಿ ಏನು ಮಾಡಬಹುದೆಂದು ಕೇಳಬೇಡಿ, ದೇಶಕ್ಕಾಗಿ ನೀವೇನು ಮಾಡಬಲ್ಲಿರಿ ಎಂಬುದನ್ನು ಕೇಳಿ" ಸೇನೆಗೆ ಸೇರಲು ತಯಾರಿ ನಡೆಸುತ್ತಿರುವ ಪುಲ್ವಾಮ ಹುತಾತ್ಮ ಯೋಧ ಮೋಹನ್ ಲಾಲ್ ಅವರ ಪುತ್ರಿಯ ಈ ಮಾತುಗಳು ಸದಾ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ ಎನ್ನುತ್ತಾರೆ 1.15 ಲಕ್ಷ ಕಿ.ಮೀ ಸಂಚರಿಸಿ 144 ಹುತಾತ್ಮ ಯೋಧರ ಮನೆಗಳಿಂದ ಮೃತ್ತಿಕೆ ಸಂಗ್ರಹಿಸಿ ವಾಪಸ್ಸಾಗಿರುವ ಬೆಂಗಳೂರು ಮೂಲದ ಉಮೇಶ್ ಗೋಪಿನಾಥ್ ಜಾಧವ್.

ವೃತ್ತಿಯಲ್ಲಿ ಫಾರ್ಮಸಿ ಪ್ರೊಫೆಸರ್ ಹಾಗೂ ಸಂಗೀತಗಾರನಾಗಿರುವ ಉಮೇಶ್ ಜಾಧವ್ ರಸ್ತೆ ಮಾರ್ಗದ ಮೂಲಕ 1.15 ಲಕ್ಷ ಕಿ.ಮೀ ಸಂಚರಿಸಿ ಹಲವು ಯುದ್ಧಗಳು ಸೇರಿದಂತೆ ಇತ್ತೀಚಿನ ಕೂನೂರ್ ದುರಂತದಲ್ಲಿ ಹುತಾತ್ಮರಾದ ಯೋಧರ ನಿವಾಸಕ್ಕೂ ತೆರಳಿ ಮೃತ್ತಿಕೆ ಸಂಗ್ರಹಿಸಿದ್ದಾರೆ.

ಸಮವಸ್ತ್ರ ಧರಿಸದೇ ದೇಶಕ್ಕಾಗಿ ಬಹಳಷ್ಟು ಕೆಲಸ ಮಾಡಬಹುದು ಎಂದು ದೇಶಾದ್ಯಂತ ಸಂಚರಿಸಿ ಯೋಧರ ಮನೆಗಳಿಗೆ ಭೇಟಿ ನೀಡಿದ ಬಳಿಕ ಅರಿತುಕೊಂಡೆ ಎನ್ನುತ್ತಾರೆ ಉಮೇಶ್ ಜಾಧವ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ