ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸಿದ ಪುಂಡರಿಗೆ ಬಿತ್ತು ಲಾಠಿ ಏಟು

ಭಾನುವಾರ, 23 ಜೂನ್ 2019 (10:56 IST)
ಮಡಿಕೇರಿ : ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸಿದ ಯುವಕರಿಗೆ  ಪೊಲೀಸರು ಬೆಂಡೆತ್ತಿದ್ದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ನಡೆದಿದೆ.ಕೇರಳದ ಮಲ್ಲಪುರಂನಿಂದ ಕಾರಿನಲ್ಲಿ ಬಂದಿದ್ದ ಯುವಕರ ಗುಂಪೊಂದು ಪಾಲಿಬೆಟ್ಟದಲ್ಲಿರುವ ಪಿಯು ಕಾಲೇಜು ಬಳಿ ನಿಂತು ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ.


ಈ ವಿಚಾರವನ್ನು ಪ್ರಾಂಶುಪಾಲರು ಪೊಲೀಸರಿಗೆ ತಿಳಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ಠಾಣಿಗೆ ಕರೆದುಕೊಂಡು ಹೋಗಿ ಲಾಠಿ ರುಚಿ ತೋರಿಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ