‘ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಕೈ ಬಿಡಬೇಡಿ ಅಂತ ಹೇಳಿದ್ವಿ. ಆದರೆ ಸ್ವಾಭಿಮಾನಕ್ಕೆ ಮತ ಕೊಡ್ಬೇಕು ಎಂದು ಸುಮಲತಾರನ್ನ ಗೆಲ್ಲಿಸಿದ್ರು. ರೈತರ ಕಬ್ಬು ಕಟಾವು ಆಗದೆ ಬೆಂಕಿ ಹಚ್ಚುವ ಸ್ಥಿತಿಗೆ ಬಂದಿದೆ. ಚುನಾವಣೆ ವೇಳೆ ಮಂಡ್ಯಕ್ಕೆ ಜೋಡೆತ್ತು ಬಂದಿದ್ವು, ನಾವಿದ್ದೇವೆ, ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ರು. ಸಮಸ್ಯೆ ಪರಿಹಾರಕ್ಕೆ ಸುಮಲತಾ ಮಂಡ್ಯದಲ್ಲಿರ್ತಾರೆ ಅಂದುಕೊಂಡಿದ್ವಿ. ರೈತರು ಸತ್ತರೂ ಇಲ್ಲ. ಬಾಯಿ ಬಡಿದುಕೊಂಡರೂ ಬರ್ತಿಲ್ಲ’ ಎಂದು ಶಿವರಾಮೇಗೌಡ ಕಿಡಿಕಾರಿದ್ದಾರೆ.
‘ಜೋಡೆತ್ತು ಹಾಗೂ ಸಂಸದರನ್ನ ಹುಡುಕಬೇಕಾದ ಪರಿಸ್ಥಿತಿ ಇದೆ. ಸುಮಲತಾ ರಾಜಕೀಯ ಸಾಕು ಸಮಸ್ಯೆ ಬಗೆಹರಿಸೋಣ ಎಂದಿದ್ರು. ಸಂಸದರೇ ಈಗ ಬನ್ನಿ ರೈತರ ಸಮಸ್ಯೆ ಬಗೆಹರಿಸೋಣ’ ಎಂದು ಅವರು ಟಾಂಗ್ ನೀಡಿದ್ದಾರೆ.