ಧೈರ್ಯವಿದ್ರೆ ಹೊರಗಡೆ ಬಾ: ಸಿಟಿ ರವಿಗೆ ಏಕವಚನದಲ್ಲೇ ಅವಾಜ್ ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್ ಫ್ಯಾನ್ಸ್‌

Sampriya

ಗುರುವಾರ, 19 ಡಿಸೆಂಬರ್ 2024 (17:33 IST)
Photo Courtesy X
ಬೆಂಗಳೂರು:  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಸಂಬಂಧ ಎಂಎಲ್‌ಸಿ ಸಿಟಿ ರವಿ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದರ ಬೆನ್ನಲ್ಲೇ ಸುವರ್ಣ ಸೌಧದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಸಿಟಿ ರವಿ ವಿರುದ್ಧ ಆಕ್ರೋಶ ಹೊರಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್ ಫ್ಯಾನ್ಸ್‌,  ಧೈರ್ಯವಿದ್ರೆ ಹೊರಗಡೆ ಬಾ ಎಂದು ಸಿಟಿ ರವಿಗೆ ಅವಾಜ್ ಹಾಕಿದ್ದಾರೆ.

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೆ, ಏಕವಚನದಲ್ಲೇ ಹರಿಹಾಯ್ದರು.

ಅದಲ್ಲದೆ ಈ ಸಂದರ್ಭದಲ್ಲಿ ಸಿಟಿ ರವಿ ವಿರುದ್ಧ ಹಲ್ಲೆಗೂ ಯತ್ನಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕೆಂಡಾಮಂಡಲವಾದ ಸಿಟಿ ರವಿ, ಬಾ ಬಾ ಹೊಡಿ ಬಾ, ಅದೇನ್ ಮಾಡ್ತಾರೆ ಮಾಡ್ಲಿ ಬಿಡ್ಲಿ ಎಂದು ಸವಾಲು ಹಾಕಿದರು.

ಏಯ್‌.. ಧೈರ್ಯವಿದ್ರೆ ಹೊರಗಡೆ ಬಾ: ಸಿ.ಟಿ.ರವಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಫ್ಯಾನ್ಸ್ ಅವಾಜ್‌‌ - 'ಅದೇನ್‌ ಮಾಡ್ತಾರೆ ಮಾಡ್ಲಿ ಬಿಡ್ರಿ' ಎಂದು ಸವಾಲ್‌ ಹಾಕಿದ ಸಿ.ಟಿ.ರವಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ