ಬುದ್ಧ ಧರ್ಮಕ್ಕೆ ಬನ್ನಿ ಎಂದು ವಿನೂತನ ಚಳುವಳಿ

ಭಾನುವಾರ, 2 ಜುಲೈ 2023 (15:51 IST)
ಜಾತಿಯವರ ಮುಂದೆ ಬಲಜಾತಿ ಓಪನ್ ಆಗಲ್ಲ,ಬಲಜಾತಿಯವರ ಮುಂದೆ ಎಡಜಾತಿ ಓಪನ್ ಆಗಲ್ಲ .ಹೊಲೆಯ, ಮಾದಿಗ ಅಂತಾ ಗೊತ್ತಾದ್ರೆ ಗೌರವ ಕೊಡ್ತಾರ ಅಂತಾ ಭಯ.ಇಲ್ಲಿ ನರಳುತ್ತಿದ್ದೇವೆ ನಾವು,ಇದನ್ನೇ ಬಾಬಾ ಸಾಹೇಬರು ಸಾಮಾಜಿಕ ಅಸಮಾನತೆ ಅಂದ್ರು.ಇದಕ್ಕೆಲ್ಲ ಪರಿಹಾರಬೇಕು ಅಂದ್ರೆ ಬುದ್ದ ಧರ್ಮಕ್ಕೆ ಬನ್ನಿ.ಬುದ್ದ ದೊಡ್ಡ ಸಮುದ್ರ ಇದ್ದಂತೆ,ಹಲವೆಡೆಯಿಂದ ನೀರು ಬಂದ್ರು ವಿಲೀನವಾಗುತ್ತೆ .ಇದು ಕಾವೇರಿ ನೀರು,ಗಂಗಾ ನೀರು ಅಂತಾ ಗುರ್ತಿಸಲಾಗಲ್ಲ .ಬುದ್ದ ಧರ್ಮ ಪ್ರಕೃತಿ ಇದ್ದ ಹಾಗೇ,ಅದಕ್ಕಾಗಿಯೇ ಬಾಬಾ ಸಾಹೇಬರು ಬುದ್ಧ ಧರ್ಮಕ್ಕೆ ಬಂದರು .ಲಿಂಗಾಯತ ಇರಲಿ ಯಾರೇ ಇರಲಿ ಬುದ್ಧ ನ ಬಳಿ ಬಂದ್ರೆ ಎಲ್ಲಾ ಹೋಯ್ತು ಅಂತಾ ಮುನ್ನೂರ ಮೂವತ್ತು ಕೋಟಿ ದೇವರನ್ನ ಬಿಟ್ಟು,ಕುರಾನ್,ಬೈಬಲ್ ಬಿಟ್ಟು ಬುದ್ಧ ಧರ್ಮಕ್ಕೆ ಬರೋದು ಸುಲಭವಲ್ಲ .ಅದನ್ನ ಸಾಧಿಸೋದು ನಮ್ಮ ಚಳವಳಿಗಳ ಕೆಲಸ.ಕೋಟಿ ಸಂಘಟನೆ ಇರಲಿ,ಮನೆಗೊಬ್ಬ ಸಂಘಟನಾಕಾರ ಇರಲಿ, ಗುರಿ ಒಂದೇ ಇರಬೇಕು .ಅಂಬೇಡ್ಕರರು ತೋರಿಸಿಕೊಟ್ಟ ಸಾಮಾಜಿಕ ಸಮಾನತೆ ಬೇಕು ಅಂದ್ರೆ ಎಲ್ಲರನ್ನ ಬುದ್ದ ನ ಹತ್ತಿರ ಕರಕೊಂಡು ಹೋಗಬೇಕು .ಇದು ಯಾವುದೇ ಧರ್ಮವನ್ನ ವಿರೋಧಿಸೋ ಕೆಲಸವಲ್ಲ ಎಂದು ಚಳುಬಳಿಗಾರರು ಫ್ರೀಡಂಪಾರ್ಕ್ ನಲ್ಲಿ ಚಳುವಳಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ