ಕಡಿಮೆ ಜನ ಇದ್ದರೂ ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತಾಡಬೇಕು.ನಾನು ಗ್ಯಾರಂಟಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲ್ಲ.ಸ್ವತಂತ್ರ ಬಂದು 70 ವರ್ಷ ಆಗಿದೆ.ಜನರನ್ನು ಇನ್ನೂ ರಷ್ಟು ವರ್ಷ ಕೈ ಚಾಚುವಂತೆ ಮಾಡ್ತೀರಾ ಅಂತ ಇಂಥ ಸಣ್ಣಮಟ್ಟದ ಸರ್ಕಾರದ ಆಸೆ ಆಮಿಷಗಳನ್ನು ಜನರಿಗೆ ಕೊಟ್ಟಿದ್ದೀರಾ.ಇದರಿಂದ ಜನ ಕೈ ಚಾಚಯವಂತೆ ಮಾಡಿದ್ದೀರಾ?ಇನ್ನು ಎಷ್ಟು ದಿನ ಜನರನ್ನು ಭಿಕ್ಷುಕರ ರೀತಿ ಇಡುತ್ತೀರ ಅಂತ ಪ್ರಶ್ನೆ ಮಾಡ್ತೀನಿ ಎಂದು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ.
ನಾನು ಸಿಎಂ ಆದಾಗ ನಿಮ್ಮ ಮಂತ್ರಿಗಳು ಏನು ಮಾಡಿದ್ರು.ಪೊಗರುದಸ್ತ್ ಇಲಾಖೆ ನಿಮ್ಮ ಕಡೆಯವರು ಇಟ್ಟುಕೊಂಡಿದ್ದರು.ಯಾವುದೇ ಟ್ರಾನ್ಫರ್ ಕೂಡ ನಾನು ಮಾಡುವಂತಿರಲಿಲ್ಲ.ಅವರ ಆದೇಶದಂತೆ ಎಲ್ಲಾ ನಡೆಯಬೇಕಿತ್ತು.ಬೆಂಗಳೂರು ಪ್ರಾಧಿಕಾರಕ್ಕೆ ಡಿಮ್ಯಾಂಟ್ ಇಟ್ಟುಕೊಂಡು ಬಂದವರನ್ನ ಆಚೆ ಇಟ್ಟಿದ್ದೆ.ಯಲಹಂಕ ತಹಶಿಲ್ದಾರರ ಕಚೇರಿಗೆ ಒಂದೂವರೆ ಕೋಟಿ ಕೊಡ್ತೀವಿ ಅಂದವರನ್ನ ಆಚೆ ಇಟ್ಟಿದ್ದೆ.ಇದು ನಮ್ಮ ಕಾಲದಲ್ಲಿ ನಡೆದಿದೆ.
ವೈಎಸ್ ಡಿ ತೆರಿಗೆ ಅಂತ ಇವರ ಸರ್ಕಾರದಲ್ಲಿ ಬಂದಿದೆಯಂತೆ,ಅದರ ಬಗ್ಗೆ ಪತ್ತೆ ಮಾಡ್ತಾ ಇದ್ದೀನಿ, ಆಮೇಲೆ ನೋಡೋಣ.ನಾನು ಒಂದು ರೂಪಾಯಿ ತೆಗೆದುಕೊಳ್ಳದೆ ಟ್ರಾನ್ಫರ್ ಮಾಡಿದ್ದೀನಿ.ನಾನು ಯಾವುದಕ್ಕೂ ಭಯ ಇಲ್ಲ.ಗವರ್ನರ್ ಅಡ್ರೆಸ್ ಮಾಡಲಿ ಆಮೇಲೆ ನೋಡೋಣ.ಸಿದ್ದರಾಮಯ್ಯ ಅವರು ಒಬ್ಬರೇನಾ ಇಲ್ಲಿ ಸಿಎಂ, ಸಿದ್ದರಾಮಯ್ಯ ಒಂದು ಹೇಳ್ತಾರೆ, ಸತೀಶ್ ಜಾರಕಿಹೊಳಿ ಒಂದು ಹೇಳ್ತಾರೆ.ಇಲ್ಲಿ ಎಷ್ಟು ಜನ ಸಿಎಂ ಇದ್ದೀರಾ ಹಾಗಾದ್ರೆ ಇದನ್ನು ಸರ್ಕಾರ ಅಂತ ಕರೀತೀರಾ?ಕೆಂಪಯ್ಯ ಅವರು ಮತ್ತೆ ಫೀಲ್ಡ್ ಇಳಿದಿದ್ದಾರೆ ನೋಡಿದ್ವಿ.ಇದೊಂದು ಪಾರದರ್ಶಕ ಸರ್ಕಾರ ಅಲ್ಲ ಅಂತ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.