ASI ವಿರುದ್ಧ ACPಗೆ ದೂರು

ಸೋಮವಾರ, 31 ಅಕ್ಟೋಬರ್ 2022 (16:24 IST)
ವಾಹಸ ಸವಾರರೊಬ್ಬರ ವಾಹನ ತಡೆದು ದಂಡ ಹಾಕಲು ಮುಂದಾಗಿದ್ದಕ್ಕೆ ಇನ್ಸ್​​ಪೆಕ್ಟರ್​​ ಒಬ್ಬರು ASIಗೆ ಆವಾಜ್​ ಹಾಕಿದ ಆಡಿಯೋ ವೈರಲ್​​ ಆಗಿತ್ತು. 41 ಸಾವಿರ ದಂಡವನ್ನು ಉಳಿಸಿಕೊಂಡಿದ್ದ ವಾಹನ ಸವಾರರನ್ನು ಟ್ರಾಫಿಕ್​​ ASI ವೆಂಕಟೇಶ್​​​ ತಡೆದು ದಂಡ ಹಾಕಲು ಮುಂದಾಗಿದ್ರು. ಆಗ ಏರ್​ಪೋರ್ಟ್​​ ಇನ್ಸ್​ಪೆಕ್ಟರ್​​ ಮುತ್ತುರಾಜ್​ ASIಗೆ ಫೋನ್​ ಮಾಡಿ ಆವಾಜ್​​​ ಹಾಕಿದ್ರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿತ್ತು. ಈ ಹಿನ್ನೆಲೆಯಲ್ಲಿ ASI ವಿರುದ್ಧ ಕ್ರಮ ಜರುಗಿಸುವಂತೆ ಇನ್ಸ್ಪೆಕ್ಟರ್ ಮುತ್ತುರಾಜ್ ದೇವನಹಳ್ಳಿ​​​ ACPಗೆ ದೂರು ನೀಡಿದ್ದಾರೆ. ವೆಂಕಟೇಶ್​​​ ಉದ್ಧಟತನದಿಂದ ಮಾತನಾಡಿ ಆಡಿಯೋ ರೆಕಾರ್ಡ್​​ ಮಾಡಿ ಮಾಧ್ಯಮಗಳಿಗೆ ಆಡಿಯೋ ವೈರಲ್ ಮಾಡಿದ್ದಾರೆ.  ಹೀಗಾಗಿ ASI ವೆಂಕಟೇಶ್​​​ ವಿರುದ್ಧ ಕ್ರಮ ಜರುಗಿಸುವಂತೆ ದೂರು ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ