ಸತ್ಯಾಸತ್ಯೆಯನ್ನ ತೋರಿಸುವ ಕೆಲಸ ಮಾಧ್ಯಮಗಳು ಮಾಡಬೇಕು- ಎಂಟಿಬಿ ನಾಗರಾಜ್
ಇನ್ಸ್‌ಪೆಕ್ಟರ್ ನಂದೀಶ್ ಸಾವಿನ ಕುರಿತು ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.ಸಾಸುವೆ ಕಾಳನ್ನ ಕುಂಬಳಕಾಯಿ ಮಾಡ್ತೀರಾ, ಕುಂಬಳಕಾಯನ್ನ ಸಾಸುವೆ ಮಾಡ್ತೀರಾ.ಸತ್ಯಾಸತ್ಯೆಯನ್ನ ತೋರಿಸುವ ಕೆಲಸವನ್ನ ಮಾಧ್ಯಮಗಳು ಮಾಡಬೇಕು.ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ, ಸರಿ ತಪ್ಪನ್ನ ತಿದ್ದುವ ಕೆಲಸವಾಗಬೇಕು.ಇನ್ಸ್‌ಪೆಕ್ಟರ್ ನಂದೀಶ್ ರವರನ್ನ ನಾನು ಹಿಂದೆ ಎಂದೂ ಭೇಟಿ ಮಾಡಿರಲಿಲ್ಲ.ಆದ್ರೇ ಮೃತಪಟ್ಟಾಗ ಹುಡುಗರು ಹೇಳಿದ್ರು ಆಗ ಹೋಗಿ ನೋಡಿದಾಗ ಚಿಕ್ಕ ಮಕ್ಕಳನ್ನ ನೋಡಿದಾಗ ಬೇಜಾರಾಯ್ತು .ಈ ರೀತಿ ಅನ್ಯಾಯ ಯಾರಿಗೂ ಆಗಬಾರದೆಂದು ಹೇಳುವ ಮೂಲಕನಂದೀಶ್ ರವರ ಸಾವಿನ ವಿಚಾರಕ್ಕೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಎಂಟಿಬಿ ನಾಗರಾಜ್ ಟಾಂಗ್ ನೀಡಿದಾರೆ.