ಕೆ.ಎಸ್.ಈಶ್ವರಪ್ಪ ಅವರ ಪುತ್ರ ಹಾಗು ಸೊಸೆ ವಿರುದ್ದ ಎಸಿಬಿ ಕೇಂದ್ರ ಕಚೇರಿಗೆ ದೂರು!

ಗುರುವಾರ, 15 ಮಾರ್ಚ್ 2018 (11:35 IST)
ಶಿವಮೊಗ್ಗ : ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಹಾಗು ಸೊಸೆ ಶಾಲಿನಿ ನಿರ್ದೇಶಕರಾಗಿರುವ  ಕಂಪೆನಿಯೊಂದರ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು ವಕೀಲರಾದ ಆರ್  ಟಿಐ ಕಾರ್ಯಕರ್ತ ವಿನೋದ್ ಅವರು ಬೆಂಗಳೂರಿನಲ್ಲಿರುವ ಎಸಿಬಿ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ.


ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್, ಸೊಸೆ ಶಾಲಿನಿ ನಿರ್ದೇಶಕರಾಗಿರುವ ಭರಣಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪೆನಿ 2010ರಲ್ಲಿ ಕಂಪೆನಿ ಕಾಯ್ದೆ ಅನುಸಾರ ನೋಂದಣಿ ಆಗಿದ್ದು, ಇದು 2,76,250 ಷೇರುಗಳನ್ನು ಹೊಂದಿತ್ತು. ಆದರೆ 10 ರೂಪಾಯಿ ಮುಖಬೆಲೆಯ ಈ ಷೇರುಗಳನ್ನು 190 ರೂಪಾಯಿ ಪ್ರೀಮಿಯಂ ಮೊತ್ತ ಸೇರಿಸಿ 200 ರೂ.ಗೆ ಮಾರಾಟ ಮಾಡಿದ್ದಾರೆ. ಪಶ್ಚಿಮ ಬಂಗಾಳದ 9 ನಕಲಿ ಕಂಪೆನಿಗಳು ಈ ಷೇರುಗಳನ್ನು ಖರೀದಿಸಿ ಲಾಭ ಗಳಿಸಿವೆ ಈ ಕುರಿತು ತನಿಖೆ ನಡೆಸಬೇಕೆಂದು ಆರ್  ಟಿಐ ಕಾರ್ಯಕರ್ತ ವಿನೋದ್ ಅವರು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಹಾಗು ಸೊಸೆ ಶಾಲಿನಿ ವಿರುದ್ದ ಎಸಿಬಿ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ. ಈ ದೂರನ್ನು ಈಗ ಪೂರ್ವ ವಲಯ ಎಸಿಬಿ ಎಸ್ಪಿ ಕಚೇರಿಗೆ ವರ್ಗಾಯಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ