ಬೆಂಗಳೂರು: ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಒಂದಾದ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಲಗ ಮತ್ತು ರಿಯಲ್ ಎಸ್ಟೇಟ್ ಚಿತ್ರ ತಾಣದ ನಡುವೆ ಕಿತ್ತಾಟ ತಾರಕೇರಿತ್ತು. ಇದೀಗ ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ತ್ರಿವೇಣಿ ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದೇ ಥಿಯೇಟರ್ನಲ್ಲಿ ರಿಯಲ್ ಎಸ್ಟೇಟ್ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ರಾಮಕೃಷ್ಣಪ್ಪ ಮುಂದಾಗಿದ್ದರು. ಆ ಕಾರಣಕ್ಕೆ ಎರಡೂ ಚಿತ್ರತಂಡಗಳ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು. ಈ ಕುರಿತು ಬುಧವಾರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಲಾಗಿತ್ತು ಮತ್ತು ದೂರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆದರೆ ಇಂದು ಉಭಯ ಚಿತ್ರ ತಂಡಗಳು ಪೋಲೀಸರ ಸಮ್ಮುಖದಲ್ಲಿ ಕಾಂಪ್ರಮೈಸ್ ಮಾಡಿಕೊಂಡಿವೆ.