ಸರಕಾರ ದುಡ್ಡಲ್ಲೇ ಕಾಂಗ್ರೆಸ್ ಭವನದ ಪಾರ್ಕಿಂಗ್ ಗೆ ಕಾಂಕ್ರೀಟ್!
ಚಿತ್ರದುರ್ಗದ ಕಾಂಗ್ರಸ್ ಕಛೇರಿ ಮುಂದಿನ ಪಾರ್ಕಿಂಗ್ ಜಾಗಕ್ಕೆ ನಗರಸಭೆ ಕಾಮಗಾರಿಯ ಕಾಂಕ್ರೀಟ್ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚಿತ್ರದುರ್ಗ ನಗರದಲ್ಲಿ ಕೆಲವು ದಿನಗಳಿಂದ ನಗರೋತ್ಥಾನದ ಹಣದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿಗೆ ಬಳಸಲಾಗಿರುವ ಕಾಂಕ್ರೀಟನ್ನು ಕಾಂಗ್ರಸ್ ಕಛೇರಿ ಮುಂದಿನ ಸುಮಾರು ಇಪ್ಪತ್ತು ಅಡಿಜಾಗಕ್ಕೆ ಬಳಸಲಾಗಿದೆ.
ಅರ್ಧಂಬರ್ಧ ಕೆಲಸಕ್ಕೆ ಕಳಪೆ ಕಾಮಗಾರಿಗೆ ಹೆಸರುವಾಸಿಯಾಗಿರೋ ನಗರಸಭೆ ರಸ್ತೆ ಕಾಮಗಾರಿಗಳು, ಕಾಂಗ್ರೆಸ್ ಕಛೇರಿ ಕೆಲಸ ಮಾಡಲು ಮುಂದಾಗಿರೋದು ಅಚ್ಚರಿ ಮೂಡಿಸಿದೆ.
ಸುಮಾರು 140 ವರ್ಷ ಇತಿಹಾಸದ ಕಾಂಗ್ರೆಸ್ ಪಕ್ಷಕ್ಕೆ ನಗರೋತ್ತಾನದ ಕಾಮಗಾರಿ ಬಳಕೆ ಮಾಡಿರೋದು ಪಕ್ಷದ ದಿವಾಳಿತನವೋ ಅಥವಾ ನಗರಸಭೆಯ ಕೆಲಸಗಾರರ ಮೇಲೆ ದೌರ್ಜನ್ಯದಿಂದ ಮಾಡಿಸಿಕೊಳ್ಳಲಾಗಿದೆಯೋ ಅನ್ನೋದು ಜನರನ್ನು ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.