ಸಿಡಿಲಿನ ಜೊತೆ ಸೆಣಸಾಟ! ಆ ರೈತ ಬದುಕಿ ಬಂದದ್ದಾದ್ರು ಹೇಗೆ?
ಭಾನುವಾರ, 24 ಅಕ್ಟೋಬರ್ 2021 (09:05 IST)
ವಿಜಯನಗರ : ಜಮೀನು ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದಂತ ರೈತನೊಬ್ಬ, ಸಂಜೆ ಮನೆಗೆ ವಾಪಾಸ್ ಆಗುತ್ತಿದ್ದಂತಹ ಸಂದರ್ಭದಲ್ಲಿ ಮಳೆಯ ಜೊತೆಗೆ ಸಿಡಿಲು ಬಂದೆರಗಿದ್ರೂ… ಕೂದಲೆಳೆಯ ಅಂತರದಲ್ಲಿ ಪಾರಾಗಿ ಬದುಕಿ ಬಂದಿದ್ದಾರೆ.
ಈ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಸಮೀಪದ ಗರಗ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಮರಿಯಮ್ಮನಹಳ್ಳಿ ಹತ್ತಿರದ ಗರಗ ಗ್ರಾಮದ ರೈತ ಮೇದಾರ ನಿಂಗಪ್ಪ ಎಂಬುವರು ಜಮೀನಿನ ಕೆಲಸಕ್ಕೆ ಹೊಲಕ್ಕೆ ತೆರಳಿದ್ದರು. ಸಂಜೆ ಮನೆಗೆ ಹಿಂದಿರುಗುವ ಸಂದರ್ಭದಲ್ಲಿಯೇ ಜೋರು ಮಳೆ ಆರಂಭಗೊಂಡಿದೆ. ಇದರ ನಡುವೆಯೂ ಮನೆಗೆ ಜೋರಾಗಿ ಧಾವಿಸಿದ್ದಾರೆ.
ಮನೆಗೆ ಬರುವ ಮಾರ್ಗಮಧ್ಯೆಯೇ ಮಳೆಯ ಜೊತೆಗೆ ಬಂದಂತ ಸಿಡಿಲು ಹೊಡೆದಿದೆ. ಈ ಸಿಡಿಲಿನಿಂದ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಲು ಬಡಿತದಿಂದಾಗಿ ತಲೆಯಲ್ಲಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನು ಪರಿಶೀಲಿಸಿದಂತ ವೈದ್ಯರು ಹೊಲಿಗೆ ಹಾಕಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ ಅವರು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.