ಚಿಕ್ಕಬಳ್ಳಾಪುರ : ಮೇಕೆದಾಟು ಪಾದಯಾತ್ರೆ 2.0 ವಿಚಾರದಲ್ಲಿ ಕಾಂಗ್ರೆಸ್ನ ನಡೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ವಿಚಾರವನ್ನು ಕಾಂಗ್ರೆಸ್ ಪಕ್ಷ ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. 5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು.
ಎರಡೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ಮೇಕೆದಾಟು ಯೋಜನೆ ಮಾಡಬೇಕು ಅಂತಿದ್ದರೆ ಮಾಡಿ ಮುಗಿಸಬಹುದಿತ್ತು. ಆದರೆ ಅವರು ಹೇಳುವುದು ಡಿಪಿಆರ್ ಮಾಡಿದ್ದೇವೆ ಅಂತ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇದೊಂದು ಸಾಹಸನಾ? ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ. ಜನ ಮೂರ್ಖರಲ್ಲ. ಡಿಪಿಆರ್ ಮಾಡಬೇಕು ಅಂದಿದ್ದೇ ಆದರೆ ಮೂರು ತಿಂಗಳು ಸಾಕಾಗಿತ್ತು. ಸುಮ್ಮನೆ 7 ವರ್ಷ ಕಾಲಹರಣ ಮಾಡಿದರು. ಇದರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ಡಿಪಿಆರ್ಗೆ ಕಳಿಸಿದ್ದು ಅದು ಸಹ ಕಾಂಗ್ರೆಸ್ನವರ ಕ್ರೆಡಿಟ್ ಅಲ್ಲ ಅಂತ ಕಾಂಗ್ರೆಸ್ ನಡೆ ಬಗ್ಗೆ ಟೀಕಿಸಿದ್ದಾರೆ.