ಕಾಂಗ್ರೆಸ್‌ಗೆ 'ಭಾರತ್ ಮಾತಾ ಕೀ ಜೈ' ಎನ್ನಲೂ ಭಯ: ಸಿದ್ದರಾಮಯ್ಯ ತವರಿನಲ್ಲಿ ಗುಡುಗಿದ ಮೋದಿ

Sampriya

ಭಾನುವಾರ, 14 ಏಪ್ರಿಲ್ 2024 (18:19 IST)
Photo Courtesy X
ಮೈಸೂರು: ವೇದಿಕೆಯಲ್ಲಿ ಕೈ ನಾಯಕರಿಗೆ 'ಭಾರತ್ ಮಾತಾ ಕೀ ಜೈ' ಎಂದು ಜೈಕಾರ ಹಾಕಲು ಕಾಂಗ್ರೆಸ್‌ನ ಹೈಕಮಾಂಡ್‌ನಿಂದ ಅನುಮತಿಬೇಕು ಎಂದು ಕೈ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅಬರು ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ಅವರು, ದೇಶ ಒಡೆಯುವ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗೆಲ್ಲಲು ಕಾಂಗ್ರೆಸ್ 100 ಕೋಟಿ ಕಪ್ಪು ಹಣ ನೀಡಲಾಗುತ್ತಿದೆ. ಇದಕ್ಕೆಲ್ಲ ಜನರು ತಕ್ಕ ಉತ್ತರ ನೀಡಬೇಕೆಂದರು.

ಕಾಂಗ್ರೆಸ್ ಪಕ್ಷ  ಅಯೋದ್ಯೆಯಲ್ಲಿ ರಾಮಲಲ್ಲಾನ  ಆಹ್ವಾನವನ್ನು ತಿರಸ್ಕರಿಸುವ ಮೂಲಕ ಹಿಂದೂಗಳ ನಂಬಿಕೆಗೆ ಅವಮಾನಿಸಿದ್ದಾರೆ. ಈ ಮೂಲಕ ಹಿಂದೂ ಧರ್ಮದ ವಿನಾಶಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಅದಲ್ಲದೆ ಕಾಂಗ್ರೆಸ್‌ನವರು ವಂಧೇ ಭಾರತ್ ಅನ್ನೋರ ವಿರುದ್ಧವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತವರೂರಿನಲ್ಲೇ ಮೋದಿ ಗುಡುಗಿದ್ದಾರೆ.  

ಇನ್ನೂ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಡಿಯೂರಪ್ಪನವರ  ನಾಯಕತ್ವವಿದೆ, ಎಚ್‌ಡಿ ಕುಮಾರಸ್ವಾಮಿಯವರ ಅನುಭವಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ