ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವಂತೆ ಕೋರಿ ಮುಖ್ಯ ಚುಣಾವಣಾಧಿಕಾರಿಗಳಲ್ಲಿ ಕಾಂಗ್ರೆಸ್ ನಾಯಕರ ಮನವಿ

ಮಂಗಳವಾರ, 15 ಮೇ 2018 (07:44 IST)
ಬೆಂಗಳೂರು : ಈಗಾಗಲೇ ರಾಜ್ಯ ಚುನಾವಣೆ ಮುಕ್ತಾಯವಾಗಿ, ಇಂದು ಮತ ಎಣಿಕೆ ಕಾರ್ಯ ಕೂಡ  ನಡೆಯಲಿದ್ದು, ಈ ವೇಳೆ ಕಾಂಗ್ರೆಸ್ ನಾಯಕರು ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವಂತೆ ಕೋರಿ ಸೋಮವಾರ ತಡ ರಾತ್ರಿ ಮುಖ್ಯ ಚುಣಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಪಕ್ಷದ ನಾಯಕ ಜಗದೀಶ್ ಶೆಟ್ಟರ ಇವಿಎಂ ಮಶಿನ್ ಟ್ಯಾಂಪರಿಂಗ್ ಕುರಿತು ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸಿದ್ದು, ಮಂಗಳವಾರ ನಡೆಯುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಶೇ.100ರಷ್ಟು ಹೊಂದಾಣಿಕೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ಉಗ್ರಪ್ಪ ನೇತೃತ್ವದಲ್ಲಿ ಮನವಿ ಮಾಡಿಕೊಂಡಿದ್ದು, ಅವರಿಗೆ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡುರಾವ್, ಕೃಷ್ಣ ಬೈರೆಗೌಡ ಹಾಗೂ ರಿಜ್ವಾನ್ ಅರ್ಷದ್ ರವರು ಸಾಥ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ