ಕಾಂಗ್ರೆಸ್ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರು ಅನಂತ್ ಅವರ ನಿಧನಕ್ಕೆ ಟ್ವೀಟ್ ಮಾಡಿ, “ಕೇಂದ್ರ ಸಚಿವ ಶ್ರೀ ಅನಂತ್ ಸಚಿವ ಜೀ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿರುವ ಸುದ್ದಿ ಕೇಳಿ ನಾನು ವಿಷಾಧಿಸುತ್ತೇನೆ. ಅನಂತ್ ಅವರ ಸ್ನೇಹಿತರು ಹಾಗೂ ಕುಟುಂಬದವರಿಗೆ ನಾನು ಸಮಾಧಾನ ತಿಳಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ತಿಳಿಸಿದ್ದಾರೆ.
ಡಿಸಿಎಂ ಪರಮೇಶ್ವರ್ ಅವರು ಕೂಡ ಟ್ವೀಟ್ ಮಾಡಿ “ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗುತ್ತಿದೆ. ಅವರು ತಮ್ಮ ತಲೆಮಾರಿನ ಅತ್ಯುನ್ನತ ರಾಜಕೀಯ ಪ್ರತಿಭೆಗಳ ಪೈಕಿ ಒಬ್ಬರಾಗಿದ್ದರು. ಜ್ಞಾನ, ಅನುಭವ ಮತ್ತು ಬುದ್ಧಿ ಅದ್ಭುತ ಪರಿಣಾಮಗಳನ್ನು ಬಳಸಿದ ಚರ್ಚಾಗಾರಾಗಿದ್ದರು. ಅವರು ಕುಟುಂಬಕ್ಕೆ ಹಾಗೂ ಸಹದ್ಯೋಗಿಗಳಿಗೆ ನಾನು ಸಂತಾಪ ಸೂಚಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಬಿಜೆಪಿಯ ಅಗ್ರಪಂಕ್ತಿಯ ನಾಯಕ ಮತ್ತು 1996 ರಿಂದಲೂ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಶ್ರೀ ಅನಂತ್ ಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ. ದುಃಖವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬದವರಿಗೆ ನೀಡಲೆಂದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
“ಅನಂತ್ ಕುಮಾರ್ ಅವರ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಯಿತು ಹಾಗೂ ತುಂಬಾ ನೋವಾಯಿತು. ಅನಂತ್ ಅವರು ನಮ್ಮ ದೇಶವನ್ನು ಹಲವು ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸಿದ ಸಂಸತ್‍ನ ಸದಸ್ಯ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಆಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ” ಎಂದು ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.