ಪ್ರಜ್ವಲ್ ರೇವಣ್ಣ ಕೇಸ್ ವಿಚಾರಣೆ ನಡೆಸಲು ಹೊರಟ ಎಸ್ ಐಟಿಗೆ ಮಹಿಳೆಯರಿಂದಲೇ ಅಸಹಕಾರ

Krishnaveni K

ಬುಧವಾರ, 1 ಮೇ 2024 (16:15 IST)
ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ ವಿಚಾರಣೆಗೆ ಹೊರಟ ಎಸ್ಐಟಿಗೆ ಮಹಿಳೆಯರಿಂದಲೇ ಅಸಹಕಾರ ಕಂಡುಬಂದಿದೆ ಎಂಬ ಮಾಹಿತಿಯಿದೆ.

ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿರುವ ಸಂತ್ರಸ್ತ ಮಹಿಳೆಯರನ್ನು ಎಸ್ ಐಟಿ ತನಿಖೆ ನಡೆಸಲು ಮುಂದಾಗಿದೆ. ಇದೀಗ ಕೆಲವು ಮಂದಿ ಮಾತ್ರ ಪ್ರಜ್ವಲ್ ವಿರುದ್ಧ ದೂರು ನೀಡಲು ಮುಂದೆ ಬಂದಿದ್ದಾರೆ. ಆದರೆ ಉಳಿದವರು ದೂರು ನೀಡಿಲ್ಲ. ಹಾಗಿದ್ದರೂ ವಿಡಿಯೋದಲ್ಲಿರುವ ಸಂತ್ರಸ್ತರನ್ನು ಎಸ್ ಐಟಿ ವಿಚಾರಣೆ ನಡೆಸಲು ಮುಂದಾಗಿದೆ.

ಆದರೆ ತನಿಖೆಗೆ ಮುಂದಾದ ಎಸ್ ಐಟಿ ತಂಡಕ್ಕೆ ಮಹಿಳೆಯರಿಂದಲೇ ಅಸಹಕಾರ ಕಂಡುಬಂದಿದೆ. ನಮ್ಮ ಬಳಿ ಏನೂ ಕೇಳಬೇಡಿ, ನಾವು ಏನೂ ಹೇಳಲ್ಲ ಎಂದು ಮಹಿಳೆಯರು ವಿವರಣೆ ನೀಡಲು ಹಿಂದೇಟು ಹಾಕಿದ್ದಾರೆ. ಇದು ಒಂದು ಮಟ್ಟಿಗೆ ಎಸ್ ಐಟಿ ಅಧಿಕಾರಿಗಳ ತನಿಖೆಗೆ ಹಿನ್ನಡೆಯಾಗಲಿದೆ.

ಇನ್ನೊಂದೆಡೆ ವಿದೇಶ ಪ್ರವಾಸದಲ್ಲಿರುವ ಪ್ರಜ್ವಲ್ ರೇವಣ್ಣ ತಮಗೆ ವಿಚಾರಣೆಗೆ ಹಾಜರಾಗಲು ಸದ್ಯಕ್ಕೆ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಏಳು ದಿನಗಳ ಕಾಲಾವಕಾಶ ನೀಡಿ ಎಂದು ವಕೀಲರ ಮೂಲಕ ಕೇಳಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ತನಿಖೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಆದರೆ ಅವರು ಸದ್ಯಕ್ಕೆ ಜರ್ಮನಿಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ