ಬೆಂಗಳೂರಿನಲ್ಲಿ ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಕೊರೊನಾ ಕೇಸ್ ಏರಿಕೆ

ಮಂಗಳವಾರ, 1 ಸೆಪ್ಟಂಬರ್ 2020 (13:13 IST)
ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಕೇಸ್ ಗಳು ಗಣನೀಯವಾಗಿ ಏರಿಕೆಯಾಗಿದೆ. ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ಆಗಸ್ಟ್ ಒಂದೇ ತಿಂಗಳಿನಲ್ಲಿ 71,729 ಕೊರೊನಾ ಕೇಸ್ ದಾಖಲಾಗಿತ್ತು . ಜುಲೈ ತಿಂಗಳಿನಲ್ಲಿ 52, 106 ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ 19, 623 ಕೇಸ್ ಹೆಚ್ಚಳವಾಗಿದೆ.

ಆದರೆ ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಗುಣಮುಖ ಕೇಸ್ ಹೆಚ್ಚಳ ವಾಗಿದೆ. ಆಗಸ್ಟ್ ತಿಂಗಳಲ್ಲಿ ಕೊರೊನಾ ಸೋಂಕಿಗೆ 909 ಜನರು ಬಲಿಯಾಗಿದ್ದರೆ, ಜುಲೈ ತಿಂಗಳಿನಲ್ಲಿ 962 ಜನ ಕೊರೊನಾಗೆ ಬಲಿಯಾಗಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ