ಡ್ರಗ್ಸ್ ಹಣದಿಂದ ಸರ್ಕಾರ ಪತನ ಎಂದ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಸಿ.ಟಿ.ರವಿ ಕಿಡಿ

ಮಂಗಳವಾರ, 1 ಸೆಪ್ಟಂಬರ್ 2020 (12:14 IST)
ಬೆಂಗಳೂರು : ಕುಮಾರಸ್ವಾಮಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಸರಿಯಾಗಿ ಹೇಳಿದ್ದಾರೋ, ಮತ್ತಲ್ಲಿ ಹೇಳಿದ್ದಾರೋ? ಕುಮಾರಸ್ವಾಮಿಯನ್ನು ತಪಾಸಣೆ ಮಾಡಿಸಬೇಕು ಎಂದು  ಕುಮಾರಸ್ವಾಮಿ ಹೇಳಿಕೆಗೆ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಡ್ರಗ್ಸ್ ಹಣದಿಂದ ಸರ್ಕಾರ ಪತನ ಎಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ಸಚಿವ ಸಿ.ಟಿ.ರವಿ ಗರಂ ಆಗಿದ್ದು, ಸರ್ಕಾರ ಯಾಕೆ ಬಿತ್ತು ಎಂದು ಎಲ್ಲರಿಗೂ ಗೊತ್ತು. ಜೆಡಿಎಸ್ ಪಕ್ಷದ ಅಧ್ಯಕ್ಷರೇ ಪಕ್ಷ ಬಿಟ್ಟು ಬಂದರು. ಕುಮಾರಸ್ವಾಮಿ ಡ್ರಗ್ಸ್ ಆರೋಪ ಮಾಡ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಡೆಯಬಹುದಿತ್ತು ಅಲ್ವಾ? ನಿಮ್ಮ ಬಳಿ ಅಧಿಕಾರ ಇತ್ತು ಇಂಟೆಲಿಜೆನ್ಸಿ ಇತ್ತು. ಹಾಗಾದರೆ ಹೆಚ್.ಡಿಕೆ ಅಷ್ಟು ದುರ್ಬಲ ಆಗಿದ್ರಾ? ಹೆಚ್.ಡಿ.ಕುಮಾರಸ್ವಾಮಿ ಡ್ರಗ್ಸ್ ದಂಧೆ ಜೊತೆ ಬಾಂಧವ್ಯ ಇತ್ತಾ? ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ