ಬೆಂಗಳೂರು : ಅಡುಗೆ ಮಾಟಡುವಾಗ ಸಾಮಾನ್ಯವಾಗಿ ಕಿಚನ್ ಗಲೀಜಾಗುತ್ತದೆ. ಇದನ್ನು ಹಾಗೇ ಕ್ಲೀನ್ ಮಾಡಿದರೆ ಸಂಪೂರ್ಣವಾಗಿ ಕ್ಲೀನ್ ಆಗುವುದಿಲ್ಲ, ಕಿಚನ್ ಕ್ಲೀನ್ ಮಾಡಲು ಈ ಹೋಮ್ ಮೇಡ್ ಕಿಚನ್ ಕ್ಲೀನರ್ ನ್ನು ಬಳಸಿ.
ಒಂದು ಬಾಟಲಿನಲ್ಲಿ 1 ಕಪ್ ನೀರು, 1 ಟೇಬಲ್ ಚಮಚ ವಿನೆಗರ್, 2 ಚಮಚ ಅಡುಗೆ ಸೋಡಾ, ½ ಚಮಚ ವಿಮ್ ಜೆಲ್ ಹಾಕಿ ಮಿಕ್ಸ್ ಮಾಡಿ ಇದನ್ನು ಅಡುಗೆ ಆದ ಬಳಿಕ , ಗ್ಯಾಸ್ ಸ್ಟವ್, ಕಿಚನ್ ನಲ್ಲಿರುವ ಟೈಲ್ಸ್ ಗಳನ್ನು ಕ್ಲೀನ್ ಮಾಡಲು ಬಳಸಬಹುದು. ಇದನ್ನು ಹಾಕಿ ಕ್ಲೀನ್ ಮಾಡಿದರೆ ಬಹಳ ಬೇಗ ಸುಲಭವಾಗಿ ಕ್ಲೀನ್ ಆಗುತ್ತದೆ.