ಕೊರೊನಾ ಎಫೆಕ್ಟ್ : ಭಾರತ 21 ದಿನ ಲಾಕ್ ಡೌನ್ – ಕಲಬುರಗಿಯಲ್ಲಿ ಒಂದು ತಿಂಗಳು ಲಾಕ್ ಡೌನ್

ಬುಧವಾರ, 25 ಮಾರ್ಚ್ 2020 (15:58 IST)
ದೇಶದಲ್ಲಿ ಕೊರೊನಾ ವೈರಸ್ ಗೆ ಮೊದಲ ಬಲಿಯಾದ ಕಲಬುರಗಿಯಲ್ಲಿ ಪ್ರಧಾನಿ ಆಶಯದಂತೆ 21 ದಿನ ಲಾಕ್ ಡೌನ್ ಆಗುತ್ತಿಲ್ಲ. ಬದಲಾಗಿ ಮುಂದಿನ ಒಂದು ತಿಂಗಳು ಲಾಕ್ ಡೌನ್ ಆಗಿರಲಿದೆ.

ಕಲಬುರಗಿ ಜಿಲ್ಲಾಡಳಿತದ ಮುಂದಿನ ಆದೇಶದವರೆಗೂ ಯಾರು ಮನೆಯಿಂದ ಹೊರಗಡೆ ಬರಬಾರದು. ಇದು ಮುಂದಿನ ಒಂದು ತಿಂಗಳ ಕಾಲ ವರೆಗೂ ಆಗಬಹುದು. ಹೀಗಂತ ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆ ಮೂರನೇ ಹಂತ ನಮ್ಮ ಮುಂದಿದೆ. ಇದನ್ನು ತಡೆಗಟ್ಟುವುದು ಏಕೈಕ ಮಾರ್ಗ ಸಾಮಾಜಿಕ ಅಂತರ ಕಾಪಾಡುವುದು. ಹೀಗಾಗಿ ಜಿಲ್ಲೆಯ ಜನತೆ ಅನಾವಶ್ಯಕವಾಗಿ ಮನೆಯಿಂದ ಹೊರ ಬರಬಾರದು ಎಂದಿದ್ದಾರೆ.

ಅಗತ್ಯ ಸೇವೆಗಳು ಲಭ್ಯವಿರುತ್ತವೆ, ಇದರಲ್ಲಿ ಗೊಂದಲ ಬೇಡ. ಅಗತ್ಯ ಸೇವೆಗಾಗಿ ಮಾತ್ರ ಹೊರಬನ್ನಿ. ಉಳಿದಂತೆ ಇನ್ನಿತರ ಯಾವುದೇ ಕೆಲಸಗಳಿಗೆ ಮನೆಯಿಂದ ದಯವಿಟ್ಟು ಹೊರ ಬರಬೇಡಿ.

ಆರೋಗ್ಯ ಪರಿಸ್ಥಿತಿಯ ಈ ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೆ ಸರಿಯುವುದಿಲ್ಲ ಎಂಬ ಕಠಿಣ ಎಚ್ಚರಿಕೆಯನ್ನು ಜಿಲ್ಲೆಯ ಜನರಿಗೆ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ