ಐಸೋಲೇಷನ್ ವಾರ್ಡ್ ಬಾತ್ ರೂಂ ನಲ್ಲಿ ಕೊರೊನಾ ಸೋಂಕಿತ ತಬ್ಲಿಘಿ ಆತ್ಮಹತ್ಯೆ

ಸೋಮವಾರ, 13 ಏಪ್ರಿಲ್ 2020 (07:01 IST)
ಮುಂಬೈ : ಖಿನ್ನತೆಗೆ ಒಳಗಾದ ಕೊರೊನಾ ಸೋಂಕಿತ ತಬ್ಲಿಘಿಯೊಬ್ಬ ಐಸೋಲೇಷನ್ ವಾರ್ಡ್ ನ ಬಾತ್ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಂಕೋಲಾದಲ್ಲಿ ನಡೆದಿದೆ.


ಮೃತ ಸೋಂಕಿತ 30 ವರ್ಷದವನಾಗಿದ್ದು, ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಜಮಾತ್ ನಲ್ಲಿ ಭಾಗಿಯಾಗಿದ್ದರು. ಈತ ತಾನೇ ಬಂದು ಆಸ್ಪತ್ರೆಗೆ ದಾಖಲಾಗಿದ್ದ. ಈತನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.


ಆದರೆ ಖಿನ್ನತೆಗೆ ಒಳಗಾದ ಈತ  ಐಸೋಲೇಷನ್ ವಾರ್ಡ್ ನ ಬಾತ್ ರೂಂ ನಲ್ಲಿ ಹರಿತವಾದ ವಸ್ತುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ