ATM ಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ ಮಾಡ್ಲೇಬೇಕು ಎಂದ ಡಿಸಿ
ಎಲ್ಲ ಬ್ಯಾಂಕ್‌ಗಳ ಎ.ಟಿ.ಎಮ್ ಗಳಲ್ಲಿ ಆಗಮಿಸುವ ಹಾಗೂ ನಿರ್ಗಮಿಸುವ ಗ್ರಾಹಕರಿಗಾಗಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ ಮಾಡ್ಲೇಬೇಕು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಎ.ಟಿ.ಎಮ್ ಗಳಿಗೆ ಬರುವ ಗ್ರಾಹಕರ ಆರೋಗ್ಯವನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲು ಒಬ್ಬ ನುರಿತ ಸಿಬ್ಬಂದಿಯನ್ನು ನಿಯೋಜಿಸಬೇಕು. ಎಲ್ಲ ವಿವರಗಳನ್ನು ರಜಿಸ್ಟರ್‌ನಲ್ಲಿ ದಾಖಲಿಸಿಕೊಂಡು ಕಡ್ಡಾಯವಾಗಿ ಪ್ರತಿ ಬ್ಯಾಂಕ್‌ಗಳ ಎ.ಟಿ.ಎಮ್ ಗಳಲ್ಲಿ ಗ್ರಾಹಕರ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರಿಗೆ ಸಲ್ಲಿಸಲು ಅಗತ್ಯ ಕ್ರಮ ಜರುಗಿಸುಬೇಕೆಂದು ತಿಳಿಸಿದ್ದಾರೆ.