ಕೊರೊನಾ ಭೀತಿ : ರೈತನ ಕೆಲಸಕ್ಕೆ ಸೆಲ್ಯೂಟ್ ಹೊಡೆದ ಪಿ ಎಸ್ ಐ

ಬುಧವಾರ, 25 ಮಾರ್ಚ್ 2020 (17:57 IST)
ಕೊರೊನಾ ವೈರಸ್ ಮುಂಜಾಗ್ರತೆಗೆ ರೈತನೊಬ್ಬ ಕೈಗೊಂಡಿರುವ ಕ್ರಮಕ್ಕೆ ಪಿಎಸ್ ಐ ಮೆಚ್ಚುಗೆ ವ್ಯಕ್ತಪಡಿಸಿ ಸೆಲ್ಯೂಟ್ ಹೊಡೆದಿದ್ದಾರೆ.

ಕಲಬುರಗಿ ಜಿಲ್ಲೆಯ ನಿಂಬರ್ಗಾ ವಲಯದ  ಹಿತ್ತಲ ಶಿರೂರ ಗ್ರಾಮದಲ್ಲಿ ರೈತರೊಬ್ಬರು ಕೊರೋನಾ ವೈರಸನಿಂದ ರಕ್ಷಣೆ ಪಡೆಯಲು ಎತ್ತಿನ ಬಂಡಿಯಲ್ಲಿ ಹೆಲ್ಮೆಟ್ ಧರಿಸಿದ್ದರು. ಇದನ್ನು ಕಂಡು ನಿಂಬರ್ಗಾ ಠಾಣೆಯ ಪಿಎಸ್‍ಐ ಸುರೇಶಕುಮಾರ ಚವ್ಹಾಣ ಅವರು ರೈತ ಲಕ್ಕಪ್ಪ ಕೊರಬಾ ಅವರಿಗೆ  ಸೆಲ್ಯೂಟ್ ನೀಡಿ ಗೌರವ ಸಲ್ಲಿಸಿದರು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದಲ್ಲಿ ಕೊರೋನಾ ಶಂಕಿತನೊಬ್ಬ ಪುಣೆ ಆಸ್ಪತ್ರೆಯಿಂದ ಪರಾರಿಯಾಗಿ ಬಂದ ಘಟನೆ ಇತ್ತೀಚಿಗಷ್ಟೇ ಭಾರೀ ಸದ್ದು ಮಾಡಿತ್ತು. ಆದರೆ  ರೈತರೊಬ್ಬರು ಹೊಲದಿಂದ ಎತ್ತನಗಾಡಿಯಲ್ಲಿ ಬರುವಾಗ ಮುಖಕ್ಕೆ ಹೆಲ್ಮೆಟ್ ಧರಿಸಿಕೊಂಡು ಬರುತ್ತಿರುವುದನ್ನು ಕಂಡು ನಿಂಬರ್ಗಾ ಠಾಣೆಯ ಪಿಎಸ್‍ಐ ಸುರೇಶಕುಮಾರ ಚವ್ಹಾಣ ತಾವೇ ಸ್ವತಃ ನಿಂತು ರೈತ ಲಕ್ಕಪ್ಪ ಕೊರಬಾ ಅವರಿಗೆ  ಸೆಲ್ಯೂಟ್ ನೀಡಿ ಗೌರವ ಸಲ್ಲಿಸಿದರು.

ಶಾಲೆ ಕಲಿತ ಅಕ್ಷರಸ್ಥರಿಗೆ ಇರದೇ ಇರುವ ಜ್ಞಾನ ರೈತರೊಬ್ಬರಿಗೆ ಇರುವುದನ್ನು ಕಂಡು ಮೂಕವಿಸ್ಮಿತನಾದೆ. ಮಾತು ಬರದೇ ಆ ಮಹಾಶಯರಿಗೆ ಗೌರವ ಸಲ್ಲಿಸಿದೆ ಎಂದು ಹೇಳುತ್ತಾರೆ ಪಿಎಸ್‍ಐ ಸುರೇಶಕುಮಾರ ಚವ್ಹಾಣ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ