ಕೊರೊನಾ ವ್ಯಾಕ್ಸಿನ್ 100ರಷ್ಟು ಜಿಲ್ಲಾ

ಸೋಮವಾರ, 31 ಜನವರಿ 2022 (14:13 IST)
ಭಾರತದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಲಸಿಕಾ ಅಭಿಯಾನ ಈಗಾಗಲೇ ಒಂದು ವರ್ಷ ಪೂರೈಸಿದ್ದು, ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ವಾರದ ಹಿಂದೆ ದೇಶದಲ್ಲಿ ಕರ್ನಾಟಕ ಮಾಡಿದಂಥ ಸಾಧನೆಯನ್ನೇ ಇದೀಗ ರಾಜ್ಯದಲ್ಲಿ ಈ ಜಿಲ್ಲೆ ಮಾಡಿದೆ.
ಕರೊನಾ ಮೊದಲ ಲಸಿಕೆ ನೀಡಿಕೆ ವಿಚಾರದಲ್ಲಿ ಕರ್ನಾಟಕ ಕಳೆದ ವಾರವೇ ದಾಖಲೆ ಬರೆದಿತ್ತು. ಅಂದರೆ ಜ.23ರ ಬೆಳಗ್ಗೆ 9.30ರ ವರೆಗಿನ ಲಸಿಕೀಕರಣ ಅಂಕಿ-ಅಂಶ ಪ್ರಕಾರ ಸರಿಯಾಗಿ 1 ವರ್ಷ 7 ದಿನಗಳಲ್ಲಿ ರಾಜ್ಯ ಫಸ್ಟ್ ಡೋಸ್ ಲಸಿಕೆ ವಿಚಾರದಲ್ಲಿ ಶೇ. 100 ಸಾಧನೆ ಮಾಡಿತ್ತು.
 
ಈಗ ಎರಡನೇ ಡೋಸ್​ ಲಸಿಕೆ ವಿಚಾರದಲ್ಲಿ ಶೇ. 100 ಸಾಧನೆ ಮಾಡಿದ ರಾಜ್ಯದ ಪ್ರಥಮ ಜಿಲ್ಲೆಯಾಗಿ ಬೆಂಗಳೂರು ಗ್ರಾಮಾಂತರ ಹೊರಹೊಮ್ಮಿದೆ. ರಾಜ್ಯದ 11 ಜಿಲ್ಲೆಗಳು ಎರಡನೇ ಡೋಸ್​ನಲ್ಲಿ ಶೇ. 90 ಸಾಧನೆ ಮಾಡಿ ಮುಂಚೂಣಿಯಲ್ಲಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ. 100 ಗುರಿ ಸಾಧಿಸಿದೆ. ಇನ್ನು ಎರಡನೇ ಡೋಸ್ ಲಸಿಕೀಕರಣದಲ್ಲಿ ರಾಜ್ಯದ ಒಟ್ಟಾರೆ ಪ್ರಗತಿ ಸದ್ಯ ಶೇ. 88 ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ