ಇಂದಿನಿಂದ ಶಾಲೆಗಳು ಆರಂಭ

ಸೋಮವಾರ, 31 ಜನವರಿ 2022 (08:03 IST)
ಬೆಂಗಳೂರು : ಇನ್ನು ಮತ್ತೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಮತ್ತೆ ಶಾಲೆಗಳು ಆರಂಭಗೊಳ್ಳಲಿದೆ.
 
ಕೊರೊನಾ ಮೂರನೇ ಅಲೆಯ ಹಾವಳಿಗೆ ಬೆಂಗಳೂರಿನಲ್ಲಿ ಶಾಲೆ ಬಂದ್ ಮಾಡಲಾಗಿತ್ತು. ಸದ್ಯ ನಾಲ್ಕು ವಾರಗಳ ಬಳಿಕ ಬೆಂಗಳೂರಿನಲ್ಲಿ ಶಾಲೆಗಳು ಪುನಾರಂಭಗೊಂಡಿವೆ. ಶೇ.100ರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.

ಶಾಲೆ ಆರಂಭಕ್ಕೆ ಕೊವಿಡ್ ನಿಯಮ ಪಾಲಿಸುವುದು ಕಡ್ಡಾಯ. ಯಾವುದಾದರೂ ತರಗತಿಯಲ್ಲಿ ಮಕ್ಕಳಿಗೆ ಕೊರೊನಾ ಬಂದರೆ ಆ ತರಗತಿ ಕೊಠಡಿ ಮುಚ್ಚಿ ಸ್ಯಾನಿಟೈಸ್ ಮಾಡಬೇಕು. ಶಾಲೆಗಳಿಗೆ ರಜೆ ನೀಡುವ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳುತ್ತಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ