ಕೊರೊನಾ ಸೋಂಕಿನಿಂದ ಗುಣಮುಖರಾದ 13 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಕಲಬುರಗಿ ನಗರದ 12 ಮತ್ತು ಆಳಂದ ಪಟ್ಟಣದ 65 ವರ್ಷದ ವೃದ್ಧೆ ಸೇರಿದಂತೆ ಒಟ್ಟು 13 ಜನ ಕೋವಿಡ್-19 ಪೀಡಿತರು ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ನಂತರ ಪ್ರಥಮ ಬಾರಿಗೆ ಒಂದೇ ದಿನ ಇಷ್ಟೊಂದು ಗರಿಷ್ಠ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ 65 ವರ್ಷದ ವೃದ್ಧೆ (ರೋಗಿ ಸಂಖ್ಯೆ-502),ಕಲಬುರಗಿ ನಗರದ ಖಮರ್ ಕಾಲೋನಿಯ 7 ವರ್ಷದ ಬಾಲಕ(ರೋಗಿ ಸಂಖ್ಯೆ-503) ಮತ್ತು 40 ವರ್ಷದ ಯುವತಿ (ರೋಗಿ ಸಂಖ್ಯೆ-517) ಹಾಗೂ ಇಸ್ಲಾಮಾಬಾದ ಕಾಲೋನಿಯ 43 ವರ್ಷದ ಪುರುಷ (ರೋಗಿ ಸಂಖ್ಯೆ-517) ಮತ್ತು 28 ವರ್ಷದ ಯುವತಿ (ರೋಗಿ ಸಂಖ್ಯೆ-518) ಗುಣಮುಖರಾಗಿದ್ದಾರೆ.
ಅದೇ ರೀತಿ ಕಲಬುರಗಿಯ ಮೋಮಿನಪುರ ಪ್ರದೇಶದ 45 ವರ್ಷದ ಯುವತಿ (ರೋಗಿ ಸಂಖ್ಯೆ-519), 22 ವರ್ಷದ ಯುವತಿ (ರೋಗಿ ಸಂಖ್ಯೆ-520), 28 ವರ್ಷದ ಯುವಕ (ರೋಗಿ ಸಂಖ್ಯೆ-526), 14 ವರ್ಷದ ಬಾಲಕಿ (ರೋಗಿ ಸಂಖ್ಯೆ-527), 22 ವರ್ಷದ ಯುವಕ (ರೋಗಿ ಸಂಖ್ಯೆ-528), 20 ವರ್ಷದ ಯುವತಿ (ರೋಗಿ ಸಂಖ್ಯೆ-530), 17 ವರ್ಷದ ಬಾಲಕಿ (ರೋಗಿ ಸಂಖ್ಯೆ-531) ಹಾಗೂ 12 ವರ್ಷದ ಬಾಲಕಿ (ರೋಗಿ ಸಂಖ್ಯೆ-532) ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ಚೇತರಿಕೆ ಕಂಡವರಾಗಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 71 ರೋಗಿಗಳಲ್ಲಿ 44 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 6 ಜನ ನಿಧನರಾಗಿದ್ದು, ಉಳಿದಂತೆ 21 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.