ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ
ಸಣ್ಣ ನೀರಾವರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಸಣ್ಣ ನೀರಾವರಿ ಸಚಿವ S.N ಬೋಸರಾಜುಗೆ ತನಿಖೆಯ ಸವಾಲು ಎದುರಾಗಿದೆ. ತಾಂತ್ರಿಕ ಮಾದರಿಗಳನ್ನು ಕಡೆಗಣಿಸಿ 1,166 ಸೌರಚಾಲಿತ ನೀರಿನ ಪಂಪ್ ಘಟಕಗಳನ್ನ ಅಳವಡಿಸಿ ಅಕ್ರಮ ಎಸಗಲಾಗಿದೆ. ರಾಜ್ಯದ 18 ಜಿಲ್ಲೆಗಳ SC, ST ಜನಾಂಗದ ರೈತರಿಗೆ ಪಂಗನಾಮ ಹಾಕಲಾಗಿದೆ. ಟೆಂಡರ್ ನಿಯಮ ಉಲ್ಲಂಘಿಸಿ ಕಡಿಮೆ ಸಾಮರ್ಥ್ಯದ ಸೌರಚಾಲಿತ ನೀರಿನ ಪಂಪಗಳ ಪೂರೈಕೆ ಮಾಡಲಾಗಿದೆ.. ಕಡಿಮೆ ಸಾಮರ್ಥ್ಯದ ಸೌರಚಾಲಿತ ನೀರಿನ ಪಂಪ್ ಪೂರೈಕೆ ಮಾಡಿದ ಏಜೆನ್ಸಿಗೆ 71.62 ಕೋಟಿ ಹಣ ಪಾವತಿಸಿ ಇಲಾಖೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ.. ಇದರ ತನಿಖೆ ಹೊಸ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಉನ್ನತ ಸಾಮರ್ಥ್ಯದ ಸ್ವಯಂ ಚಾಲಿತ ಸೌರ ಘಟಕಗಳ ಅನಗತ್ಯ ಖರೀದಿಗೆ 8 ಕೋಟಿ ಪಾವತಿಸಿ ಅಕ್ರಮ ಎಸಗಲಾಗಿದೆ. ಟೆಂಡರ್ ನಿಯಮದಲ್ಲಿನ ಮಾದರಿ ಮಾನದಂಡಗಳನ್ನ ಉಲ್ಲಂಘಿಸಿ ಸೌರ ಪಂಪ್ಗಳ ಖರೀದಿ ನಡೆದಿದೆ. ಲೆಕ್ಕ ತಪಾಸಣೆ ವೇಳೆಯಲ್ಲಿ ಈ ಅಕ್ರಮ ಬಯಲಾಗಿದೆ.