ಸಂಸತ್ ಅಧಿವೇಶನಕ್ಕೆ ಕ್ಷಣಗಣನೆ: ವಿಪಕ್ಷಗಳು ನಿಶ್ಯಸ್ತ್ರ

ಭಾನುವಾರ, 16 ಜೂನ್ 2019 (19:48 IST)
ಲೋಕಸಮರದಲ್ಲಿ ಅಭೂತಪೂರ್ವ ವಿಜಯದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಏತನ್ಮಧ್ಯೆ, ಜೂನ್ 17ರಿಂದ ಸಂಸತ್ ಅಧಿವೇಶನ ಆರಂಭಗೊಳ್ಳಲಿದೆ.

ಸಂಸತ್ ನಲ್ಲಿ ಮಹತ್ವದ ಅಧಿವೇಶನ ಆರಂಭಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಆದರೆ ಸರಕಾರದ ವೈಫಲ್ಯಗಳ ವಿರುದ್ಧ ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಇದುವರೆಗೂ ಅಗತ್ಯ ಸಿದ್ಧತೆ ಮತ್ತು ಒಗ್ಗಟ್ಟಿನ ಮಂತ್ರ ಜಪಿಸಿಲ್ಲ. ಹೀಗಾಗಿ ಮೋದಿ ನಡೆದದ್ದೇ ದಾರಿ ಎನ್ನುವಂತೆ ಅಧಿವೇಶನ ಆಗಲಿದೆ ಎನ್ನುವ ಚರ್ಚೆಗಳು ಶುರುವಾಗಿವೆ.

ಚುನಾವಣೆ ಮೊದಲೇ ಎನ್ ಡಿ ಎ ಮೈತ್ರಿ ಕೂಟ ರಚಿಸಿಕೊಂಡಿದ್ದ ಮೋದಿ ಸಫಲರಾಗಿ ಅಧಿಕಾರಕ್ಕೆ ಏರಿದ್ದಾರೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಜತೆಯಾಗಿ ಚುನಾವಣೆ ಎದುರಿಸಿದರೂ ಯಾವುದೇ ಯಶಸ್ಸು ಕಾಣಲಿಲ್ಲ. ಕಾಂಗ್ರೆಸ್ ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ. ಆದರೆ ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯತಂತ್ರ ಅಧಿವೇಶನ ಆರಂಭಗೊಂಡರೂ ಹೆಣೆದಿಲ್ಲ ಎನ್ನಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ