ಅನೈತಿಕ ಲವ್ವಿ ಡವ್ವಿ ನಡೆಸಿ ಹೆಣವಾದ ಜೋಡಿ

ಮಂಗಳವಾರ, 2 ಜುಲೈ 2019 (14:52 IST)
ಆ ಕಂಪನಿಯಲ್ಲಿ ಆತ ಸೆಕ್ಯೂರಿಟಿಯಾಗಿದ್ದ. ಆಕೆ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋಕೆ ಬರುತ್ತಿದ್ದಳು. ಇವರಿಬ್ಬರ ಪರಿಚಯ ಕ್ರಮೇಣ ಅನೈತಿಕ ಸಂಬಂಧಕ್ಕೆ ತಿರುಗಿದೆ. ಆಕೆಗೆ ಗಂಡನಿಗೆ ಈ ವಿಷಯ ಗೊತ್ತಾಗಿದ್ದೇ ತಡ, ಅನೈತಿಕ ಸಂಬಂಧ ಹೊಂದಿದ್ದವರು ಹೆಣವಾಗಿದ್ದಾರೆ.

ಮೈಸೂರಿನಲ್ಲಿ ಈ ಘಟನೆ ನಡೆದಿದೆ. ಸೆಕ್ಯೂರಿಟಿ ಸಂತೋಷ್ (34) ಹಾಗೂ ಸುಮಿತ್ರಾ (35) ಮೃತಪಟ್ಟವರು. ಅರ್ಚನಾ ಎನ್ನುವರನ್ನು ಸಂತೋಷ ಮದುವೆಯಾಗಿದ್ದರು. ಸುಮಿತ್ರಾ ಸಿದ್ದರಾಜುವಿನ ಜತೆ ಮದುವೆಮಾಡಿಕೊಂಡಿದ್ದರು.

ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, ಸುಮಿತ್ರಾ ನಡುವೆ ಲವ್ವಿಡವ್ವಿ ಶುರುವಾಗಿದೆ. ಇವರಿಬ್ಬರ ಅನೈತಿಕ ಸಂಬಂಧ ಸುಮಿತ್ರಾ ಗಂಡನಾದ ಸಿದ್ದರಾಜುವಿಗೆ ಗೊತ್ತಾಗಿದೆ.

ಕೆಲ ದಿನಗಳ ಹಿಂದೆ ಸುಮಿತ್ರಾ ಮನೆಬಿಟ್ಟು ಓಡಿಹೋಗಿದ್ದಳಂತೆ. ಆಕೆಯ ಗಂಡನಾಗಿರುವ ಸಿದ್ದರಾಜುವಿಗೆ ಅನುಮಾನ ಬಂದು ಪೊಲೀಸರ ಜತೆಗೆ ಸಂತೋಷ ಮನೆಗೆ ಹೋಗಿದ್ದಾರೆ. ಅಲ್ಲಿ ಹೋಗಿ ನೋಡಿದರೆ ಸೀರೆಯಿಂದ ನೇಣು ಬಿಗಿದುಕೊಂಡು ಇಬ್ಬರೂ ಮೃತಪಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ