ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ! 5,058 ಕೋಟಿ ರೂ. ಬಿಲ್ ಬಾಕಿ

ಬುಧವಾರ, 25 ಜನವರಿ 2023 (06:44 IST)
ಬೆಂಗಳೂರು : ಸಾಮಾನ್ಯವಾಗಿ ಎರಡು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲ ಅಂದರೆ ಕನೆಕ್ಷನ್ ಕಟ್ ಮಾಡುತ್ತೆ ಬೆಸ್ಕಾಂ. ಅದರೆ ಸರ್ಕಾರಿ ಇಲಾಖೆಗಳಿಗೆ ಮಾತ್ರ ಈ ನಿಯಮ ಪಾಲನೆ ಮಾಡೋದೇ ಇಲ್ಲ.

ಇದಕ್ಕೆ ಸಾಕ್ಷಿ ನಮ್ಮ ಬೆಂಗಳೂರಿನ ಸರ್ಕಾರಿ ಕಚೇರಿಗಳು 5,058 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಸರ್ಕಾರಿ ಕಚೇರಿಗಳು ಬೆಸ್ಕಾಂ ಬಿಲ್ ಪಾವತಿ ಮಾಡದೇ ಕೋಟಿ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿವೆ. ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ ಕಚೇರಿಗಳು, ಸಣ್ಣ, ಮಧ್ಯಮ ನೀರಾವರಿ ಇಲಾಖೆ ಸೇರಿ ಹಲವು ಕಚೇರಿಗಳು ಬಿಲ್ ಬಾಕಿ ಉಳಿಸಿಕೊಂಡಿವೆ.

ಯಾಕೆ ಈ ಇಲಾಖೆಗಳಲ್ಲಿ ಕರೆಂಟ್ ಬಿಲ್ ಕಟ್ಟೋಕೂ ದುಡ್ಡಿಲ್ವಾ ಅನ್ಕೋಬೇಡಿ. ಸರ್ಕಾರಿ ಇಲಾಖೆಗಳಲ್ಲಿ ಶೇಕಡಾ 60 ರಷ್ಟು ಹಣ ವಿದ್ಯುತ್ ಬಿಲ್ಗಾಗಿ ಮೀಸಲಿದ್ದರೂ, ಸರ್ಕಾರಿ ಕಚೇರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೇ ಬಿಲ್ ಬಾಕಿ ಉಳಿಸಿಕೊಂಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ