3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ತಲೆಯನ್ನೇ ಕತ್ತರಿಸಿದ ಕಾಮುಕರು

ಗುರುವಾರ, 1 ಆಗಸ್ಟ್ 2019 (11:00 IST)
ನವದೆಹಲಿ : ಮೂರು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು ಆಕೆಯ ಕತ್ತನ್ನೇ ಕತ್ತರಿಸಿದ ಘಟನೆ ಜಾರ್ಖಂಡದ ಜಮ್​ಶೆಡ್​ಪುರ್​ನಲ್ಲಿ ನೆಡೆದಿದೆ.
ಟಾಟಾನಗರ್​ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಮೂರು ವರ್ಷದ ಬಾಲಕಿಯನ್ನು ಮೂವರು ಅಪಹರಣ ಮಾಡಿದ್ದರು. ಬಾಲಕಿ ಕಾಣದೆ  ಹೆತ್ತವರು ದೂರು ದಾಖಲಿಸಿದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿಯ ತಲೆಯಿಲ್ಲದ ದೇಹ ಜಮಶೆಡ್​ಪುರದ ಹೊರ ಭಾಗದಲ್ಲಿ ದೊರೆತಿದೆ. ಶ್ವಾನ ದಳದ ಸಹಾಯದಿಂದ ಬಾಲಕಿಯ ತಲೆಯನ್ನು ಪತ್ತೆ ಮಾಡಲಾಗಿದೆ.


ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ವಿಚಾರ ತಿಳಿದುಬಂದಿದ್ದು, ತಲೆ ಮರಿಸಿಕೊಂಡಿರುವ ಆರೋಪಿಗಳಿಗಾಗಿ  ಪೊಲೀಸರು ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ