ವೃದ್ಧನಿಗೆ ಸೈಬರ್ ಕಳ್ಳರ ಮಹಾ ದೋಖಾ
ಗೃಹಜ್ಯೋತಿ ಯೋಜನೆಗೆ ಆರಂಭದ ವೇಳೆಯೇ ಸೈಬರ್ ಕಳ್ಳರ ಕಾಟ ಹೆಚ್ಚಾಗಿದೆ. ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ಸೈಬರ್ ಕಳ್ಳರು ಜನರಿಗೆ ವಂಚನೆ ಮಾಡಿದ್ದಾರೆ. ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ 53 ಸಾವಿರ ಹಣ ಕಳೆದುಕೊಂಡಿದ್ದಾರೆ. ಮೊದಲಿಗೆ ನಾರಾಯಣ್ ಮೊಬೈಲ್ ನಂಬರ್ಗೆ ವಂಚಕರು ಲಿಂಕ್ ಕಳಿಸಿದ್ದಾರೆ. ಬಳಿಕ ಕರೆ ಮಾಡಿ ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಹೇಳಿದ್ದಾರೆ. ನೀವು ಇಂದೇ ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದರೆ ಕನೆಕ್ಷನ್ ಕಟ್ ಆಗುತ್ತೆ ಎಂದು ಸೂಚನೆ ನೀಡಿದ್ದಾರೆ.. ಇದರಿಂದ ಗಾಬರಿಯಾಗಿದ್ದ ವೃದ್ಧ ನಾರಾಯಣ್ ಪ್ರಸಾದ್ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ನಾರಾಯಣ್ ಪ್ರಸಾದ್ ಅವರ ಅಕೌಂಟ್ನಿಂದ 53 ಸಾವಿರ ಹಣ ಕಟ್ ಆಗಿದೆ.. ಕಾಡುಗೋಡಿ ಪೊಲೀಸ್ ಠಾಣೆಗೆ ವೃದ್ಧ ನಾರಾಯಣ್ ದೂರು ಸಲ್ಲಿಸಿದ್ದಾರೆ. ಪೊಲೀಸರು ವಂಚನೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.