ಅಪ್ಪ-ಅಮ್ಮ, ಮಗಳು ಬೆಳ್ಳಂಬೆಳಗ್ಗೆ ಹೀಗೆ ಮಾಡೋದಾ?
ಅಪ್ಪ – ಅಮ್ಮ ಹಾಗೂ ಮಗಳು ಸೇರಿಕೊಂಡು ನಸುಕಿನ ವೇಳೆ ಮಾಡಬಾರದ್ದನ್ನು ಮಾಡಿದ್ದಾರೆ.
ಚಿತ್ರದುರ್ಗ ನಗರದ ಗಾರೇಹಟ್ಟಿಯಲ್ಲಿ ಘಟನೆ ನಡೆದಿದ್ದು, ಅರುಣ್ ಕುಮಾರ್ (40), ಲತಾ(36), ಅಮೃತ (13)ಮೃತ ದುರ್ದೈವಿಗಳಾಗಿದ್ದಾರೆ.
ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಡಿಗೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.