ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದು ಹಾಕಿದ್ದರಂತೆ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ

ಸೋಮವಾರ, 30 ಡಿಸೆಂಬರ್ 2019 (09:10 IST)
ಇಸ್ಲಾಮಾಬಾದ್: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಪಾಕ್ ಟಿವಿ ವಾಹಿನಿಯೊಂದಕ್ಕೆ ನೀಡಿದ ಹೇಳಿಕೆ ಭಾರತೀಯರ ಕೆಂಗಣ‍್ಣಿಗೆ ಗುರಿಯಾಗಿದೆ.


ಸಂದರ್ಶನವೊಂದರಲ್ಲಿ ಮಾತನಾಡಿರುವ ಅಫ್ರಿದಿ ನನ್ನ ಮಗಳು ಒಮ್ಮೆ ಆರತಿ ಮಾಡುವ ವಿಡಿಯೋ ನೋಡಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದಿದ್ದಾರೆ. ಈ ಮೂಲಕ ಹಿಂದೂಗಳ ಪ್ರಮುಖ ಸಂಪ್ರದಾಯವನ್ನು ಅಣಕಿಸಿದ್ದಾರೆ.

ಅಫ್ರಿದಿಯ ಹೇಳಿಕೆಗೆ ಟ್ವಿಟರ್ ನಲ್ಲಿ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಪಾಕಿಸ್ತಾನದ ಜಾತ್ಯಾತೀತೆಯ ಮುಖವಾಡ ಎಂದಿದ್ದಾರೆ. ಈ ಸಂದರ್ಶನದಲ್ಲಿ ಆರತಿ ಮಾಡುವ ರೀತಿಯನ್ನೂ ಅಣಕಿಸುವ ರೀತಿಯಲ್ಲಿ ಅಫ್ರಿದಿ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ