ಅಮಿತಾಬ್ ಬಚ್ಚನ್ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ

ಮಂಗಳವಾರ, 24 ಸೆಪ್ಟಂಬರ್ 2019 (19:59 IST)
ಬಾಲಿವುಡ್ ನ ಹಿರಿಯ ನಟ, ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿದೆ.

ಕೇಂದ್ರ ವಾರ್ತಾ ಸಚಿವ ಪ್ರಕಾಶ ಜಾವಡೇಕರ್ ಈ ಘೋಷಣೆ ಮಾಡಿದ್ದಾರೆ.

ದೇಶದ ಚಲನಚಿತ್ರ ರಂಗದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಹತ್ವ ಪಡೆದುಕೊಂಡಿದೆ.

ಅಂತರಾಷ್ಟ್ರೀಯ ಸಿನಿ ರಸಿಕರು ಹಾಗೂ ದೇಶದ ಜನರು ಅಮಿತಾಬ್ ಅವರಿಗೆ ದೊರೆತ ಗೌರವದಿಂದ ಸಂತಸಗೊಂಡಿದ್ದಾರೆ. ಹೀಗಂತ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ