ಹೆಸರುಕಾಳು ಖರೀದಿ ಕೇಂದ್ರಗಳು ಪ್ರಾರಂಭ

ಶುಕ್ರವಾರ, 31 ಆಗಸ್ಟ್ 2018 (19:23 IST)
ಕಲಬುರಗಿ ಜಿಲ್ಲೆಯಾದ್ಯಂತ ರೈತರಿಂದ ಹೆಸರುಕಾಳನ್ನು ಆಗಸ್ಟ್ 31 ರಿಂದ ಖರೀದಿಸಲಾಗುತ್ತಿದೆ.
ಸರ್ಕಾರದಿಂದ ಒಟ್ಟು 43  ಹೆಸರುಕಾಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕರ್ಫೋಸ್ ಸಮಿತಿ ಅಧ್ಯಕ್ಷ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.

ಪ್ರತಿಯೊಬ್ಬ ರೈತರು 10 ಕ್ವಿಂ. ಗರಿಷ್ಟ ಪ್ರಮಾಣದಲ್ಲಿ ಹೆಸರುಕಾಳು ಪ್ರತಿ ಕ್ವಿಂಟಲ್‍ಗೆ 6,975 ರೂ.ಗಳ ದರದಲ್ಲಿ ತಮ್ಮ ಗ್ರಾಮಕ್ಕೆ ಹತ್ತಿರದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ. ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಹೊಲದ ಪಹಣಿ ಪತ್ರ, ಆಧಾರ ಕಾರ್ಡ, ಬೆಳೆ ದೃಢೀಕರಣ ಪತ್ರ ಹಾಗೂ ಆಧಾರ ಕಾರ್ಡ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿರುವ ಪಾಸ್ ಪುಸ್ತಕದ ಝರಾಕ್ಸ ಪ್ರತಿಯನ್ನು  ದೃಢೀಕರಿಸಿ ಸಲ್ಲಿಸಿ  31.08.2018 ರಿಂದ 09.09.2018 ರ ವೆರೆಗೆ ಹೆಸರು ನೊಂದಾಯಿಸಿ ಕೊಳ್ಳಬಹುದಾಗಿದೆ. ಹೆಸರುಕಾಳು ಖರೀದಿ ಪ್ರಕ್ರಿಯೇಯು   31.08.2018 ರಿಂದ 30 (ಮೂವತ್ತು) ದಿನಗಳ ವರೆಗೆ ಮಾತ್ರ ಇರುತ್ತದೆ.

ರೈತರು ಹೆಸರುಕಾಳು ಹುಟ್ಟುವಳಿಯನ್ನು ಖರೀದಿ ಕೇಂದ್ರಕ್ಕೆ ತಂದು ತಮ್ಮ ಉಪಸ್ಥಿತಿಯಲ್ಲಿಯೇ ಹೆಸರುಕಾಳು ತೂಕ ಮಾಡಿಸಿಕೊಳ್ಳಬೇಕು ಹಾಗೂ ಅಧಿಕೃತ ರಸೀತಿಯನ್ನು ಪಡೆದುಕೊಳ್ಳಬೇಕು. ಖರೀದಿ ಕೇಂದ್ರದಲ್ಲಿ ಯಾವುದೇ ಹಣ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಹೆಸರುಕಾಳು ಉತ್ಪನ್ನ ಮಾರಾಟದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ (ಆಃಖಿ) ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ