ಕಾಡಾನೆಗಳ ದಾಂಧಲೆಯಿಂದ ಏನಾಯ್ತು ಗೊತ್ತಾ?

ಶುಕ್ರವಾರ, 2 ಆಗಸ್ಟ್ 2019 (14:30 IST)
ಕಾಡಾನೆಗಳ ಹಾವಳಿಗೆ ಆ ಜಿಲ್ಲೆಯ ಬೆಳೆಗಾರರ ಬದುಕೇ ಹಾಳಾಗಿ ಹೋಗುತ್ತಿದೆ.

ಕೋಲಾರದಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಆನೆಗಳ ಉಪಟಳದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಕೋಲಾರದ ಬಂಗಾರಪೇಟೆ ತಾಲೂಕಿನ ಮಾರಂಡಹಳ್ಳಿ ಬಳಿ ಕಾಡಾನೆಗಳ ದಾಳಿ ನಡೆದಿದೆ.

ಶುಕ್ರವಾರ ಬೆಳಗಿನ ಜಾವ ದಾಳಿ ಮಾಡಿದ ಕಾಡಾನೆಗಳು ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ.

ಕಾಡಾನೆಗಳ ದಾಳಿಯಿಂದ ಟೊಮೋಟೋ, ಬಾಳೆ, ತೋಟಗಳ ಬೆಳೆಗಳು ಹಾಳಾಗಿವೆ. ಆನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆಯಿಂದ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ