ಅತ್ತೆಯನ್ನು ಕೊಲ್ಲಲು ಮಾತ್ರೆ ಕೊಡಿ: ಮೆಸೇಜ್ ನೋಡಿ ವೈದ್ಯ ಶಾಕ್

Krishnaveni K

ಬುಧವಾರ, 19 ಫೆಬ್ರವರಿ 2025 (10:13 IST)
ಬೆಂಗಳೂರು: ಮನೆ ಎಂದ ಮೇಲೆ ಅತ್ತೆ, ಸೊಸೆ ಜಗಳ ಸಾಮಾನ್ಯ. ಆದರೆ ಇಲ್ಲೊಬ್ಬ ಸೊಸೆ, ಅತ್ತೆಯನ್ನು ಕೊಲ್ಲಲು ಮಾತ್ರೆ ಕೊಡಿ ಎಂದು ಮೆಸೇಜ್ ಮಾಡಿ ವೈದ್ಯರಿಗೇ ಶಾಕ್ ಕೊಟ್ಟಿದ್ದಾಳೆ.

ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನನ್ನ ಅತ್ತೆ ಜೊತೆಗೆ ನನಗೆ ಸಾಕಾಗಿ ಹೋಗಿದೆ. ಅವರನ್ನು ಕೊಲ್ಲಲು ಮಾತ್ರೆ ಕೊಡಿ. ಒಂದೆರಡು ಮಾತ್ರೆ ಹೆಚ್ಚು ಕೊಟ್ಟರೆ ಸಾಕಲ್ವೇ ಎಂದು ವೈದ್ಯ ಸುನಿಲ್ ಕುಮಾರ್ ಎಂಬವರಿಗೆ ವ್ಯಾಟ್ಸಪ್ ಮೆಸೇಜ್ ಮಾಡಿದ್ದಾಳೆ.

ಇದನ್ನು ನೋಡಿ ಡಾ ಸುನಿಲ್ ಕುಮಾರ್ ಶಾಕ್ ಆಗಿದ್ದಾರೆ. ಮಹಿಳೆಗೆ ಮರು ಸಂದೇಶ ಕಳುಹಿಸಿದ್ದ ವೈದ್ಯರು ಈ ರೀತಿ ಮಾಡುವುದು ತಪ್ಪು ಎಂದು ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಬಳಿಕ ಮಹಿಳೆ ವೈದ್ಯರ ಮೆಸೇಜ್ ಡಿಲೀಟ್ ಮಾಡಿ ನಂಬರ್ ಬ್ಲಾಕ್ ಮಾಡಿದ್ದಾಳೆ.

ತಕ್ಷಣವೇ ಡಾ ಸುನಿಲ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ವೈದ್ಯರು ನೀಡಿದ ಮಾಹಿತಿ ಮೇರೆಗೆ ಮಹಿಳೆಯ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯಕ್ಕೆ ಆಕೆಯ ನಂಬರ್ ಸ್ವಿಚ್ ಆಫ್ ಬರುತ್ತಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ